ರೋಣ: ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆ ಹೋದವರೂ ರಸ್ತೆ ಅಪಘಾತದಲ್ಲಿ ಮಸಣ ಸೇರಿದ ದಾರುಣ ಘಟನೆ ತಾಲೂಕಿನ ಹಿರೇಹಾಳ ಮತ್ತು ಬಾದಾಮಿ ತಾಲೂಕಿನ ಜಾಲಿಹಾಳ ಮಧ್ಯೆ ಭಾನುವಾರ ರಾತ್ರಿ ನಡೆದಿದೆ.
ಅಂತ್ಯ ಸಂಸ್ಕಾರ ಮುಗಿಸಿ ಗ್ರಾಮಕ್ಕೆ ಮರಳುತ್ತಿದ್ದ ಸಂದರ್ಭದಲ್ಲಿ ಹಿರೇಹಾಳ ಬಳಿ ವಾಹನವೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು ,ಘಟನೆಯಲ್ಲಿ ತಾಲೂಕಿನ ಡ.ಸ. ಹಡಗಲಿ ಗ್ರಾಮದ ಕಾರು ಚಾಲಕ ಮಂಜುನಾಥ ಮಾರನಬಸರಿ (35), ಬಸನಗೌಡ ಪಾಟೀಲ (66) ಮತ್ತು ಸಂಗಮ್ಮ ಪಾಟೀಲ (55) ಮೃತಪಟ್ಟಿದ್ದಾರೆ. ಇನ್ನೂ ಇಬ್ಬರಿಗೆ ತೀವ್ರಗಾಯಗಳಾಗಿದ್ದು, ಗದಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

