Breaking News

ಬಸ್‌, ಲಾರಿ, ಕಾರು ನಡುವೆ ಸರಣಿ ಅಪಘಾತ

ದಾಬಸ್‌ಪೇಟೆ: ಸೋಂಪುರ ಹೋಬಳಿಯ ಎಡೇಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಬೆಂಗಳೂರು-ತುಮಕೂರು ರಸ್ತೆಯಲ್ಲಿ ಐರಾವತ ಬಸ್‌, ಲಾರಿ ಹಾಗೂ ಕಾರಿನ ನಡುವೆ ಸರಣಿ ಅಪಘಾತ ಜ.30 ರಂದು ನಡೆದಿತ್ತು.

ಮಧ್ಯಾಹ್ನ 2ರ ವೇಳೆಗೆ ಎಡೇಹಳ್ಳಿ ಬಳಿ ರಸ್ತೆಬದಿಗೆ ನಿಂತಿದ್ದ ಸಕ್ಕರೆ ಮೂಟೆಗಳ ತುಂಬಿದ್ದ ಲಾರಿಗೆ ಹಿಂಬದಿಯಿಂದ ಐರಾವತ ಬಸ್‌ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನ ಮುಂಭಾಗ ಪೂರ್ಣವಾಗಿ ಜಖಂಗೊಂಡಿದ್ದು ಅದೃಷ್ಟವಷಾತ್‌ ಬಸ್‌ನಲ್ಲಿದ್ದವರು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ಬಸ್‌ಗೆ ಹಿಂಬಂದಿಯಿಂದ ಕಾರೊಂದು ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ
ಗಾಯಗಳಾಗಿದ್ದವು. ಸರಣಿ ಅಪಘಾತದಿಂದ 2 ಗಂಟೆಗಿಂತಲೂ ಹೆಚ್ಚು ಕಾಲ ಸುಮಾರು 1 ಕಿ.ಮೀ.ಗಿಂತಲೂ ಉದ್ದಕ್ಕೂ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

Share News

About admin

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *