Breaking News

ಚಿಕ್ಕಮಗಳೂರುನಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ಧ ಪ್ರತಿಭಟನೆ ಯಶಸ್ವಿ


ಚಿಕ್ಕಮಗಳೂರು: ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನಿಸಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಕರೆ ನೀಡಿದ್ದ ನಗರ ಬಂದ್ ಭಾಗಶಃ ಯಶಸ್ವಿಯಾಯಿತು.

ದಲಿತ ಸಂಘರ್ಷ ಸಮಿತಿ, ಬಿವಿಎಸ್, ಎಸ್‌ಡಿಪಿಐ, ಹಜರತ್ ಟಿಪ್ಪು ಸುಲ್ತಾನ್‌ ಅಭಿಮಾನಿಗಳ ಸಂಘದ ಕಾರ್ಯಕರ್ತರು ಬೆಳಿಗ್ಗೆಯೇ ರಸ್ತೆಗಿಳಿದು ದ್ವಿಚಕ್ರ ವಾಹನಗಳಲ್ಲಿ ನಗರದಲ್ಲಿ ಸುತ್ತಿದರು.ಅಂಗಡಿ ಮುಂಗಟ್ಟು ತೆರೆಯದಂತೆ ಮಾಲೀಕರಿಗೆ ಮನವಿ ಮಾಡಿ, ಬಾಗಿಲು ಮುಚ್ಚಿಸಿದರು.

ನಗರದ ಐಜಿ ರಸ್ತೆ, ಎಂ.ಜಿ ರಸ್ತೆ, ಆರ್‌ಜಿ ರಸ್ತೆಗಳಲ್ಲಿ ಬಟ್ಟೆ, ಚಪ್ಪಲಿ, ದಿನಸಿ, ತರಕಾರಿ, ಹಣ್ಣು, ಚಿನ್ನಾಭರಣ, ಮಾಂಸ, ಮೀನು ಮಾರಾಟ ಮಳಿಗೆಗಳು, ಎಲೆಕ್ಟ್ರಿಕ್, ಹಾರ್ಡ್‌ವೇರ್ ಮಳಿಗೆಗಳು, ಹೊಟೇಲ್ ಬಾಗಿಲು ಮುಚ್ಚಿದ್ದವು.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *