Breaking News

KAS ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ತರಗತಿಗಳಿಗೆ ಚಾಲನೆ

ಧಾರವಾಡ: ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ನಡೆಸಲಾಗುವ 3 ತಿಂಗಳ KAS ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ತರಗತಿಗಳಿಗೆ ಇಂದು ಚಾಲನೆ ನೀಡಲಾಯಿತು.

ಧಾರವಾಡದ ಸಿ ಬಿ ನಗರದಲ್ಲಿ ನಿರ್ಮಿಸಲಾಗಿರುವ ನೂತನ ಸ್ಟುಡಿಯೊದಲ್ಲಿ ಆನ್‌ಲೈನ್‌ ತರಗತಿಗಳಿಗೆ ಮಾಜಿ ಸಚಿವರಾದ ಶ್ರೀ ಸಂತೋಷ್‌ ಲಾಡ್‌ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ಬಡ ಮತ್ತು ಪ್ರತಿಭಾವಂತ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಕಡಿಮೆ ದರದಲ್ಲಿ ತರಬೇತಿ ಸಿಗಬೇಕು ಎಂಬ ಉದ್ದೇಶದಿಂದ ಈ ಆನ್‌ಲೈನ್‌ ಕ್ಲಾಸ್‌ಗಳನ್ನು ಆರಂಭಿಸಲಾಗಿದೆ. ಈ ತರಗತಿಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಿ. ನಿಮ್ಮ ಜೀವನದ ತಿರುವಿಗೆ ಈ ತರಗತಿಗಳು ಸಹಾಯವಾದರೆ ಅದೇ ನಮಗೆ ಸಿಗುವ ಖುಷಿ. ಇವುಗಳಿಂದ ಎಲ್ಲರಿಗೂ ಸಹಾಯವಾಗಲಿ. ಭವಿಷ್ಯ ಉಜ್ವಲವಾಗಲಿ” ಎಂದು ಶುಭ ಹಾರೈಸಿದರು.

” ತರಗತಿಗಳು ತಪ್ಪಿ ಹೋದರೆ, ತರಗತಿಗಳಿಗೆ ಸರಿಯಾಗಿ ಹಾಜರಾಗಲು ಆಗದೇ ಇರುವವರಿಗೆ 90 ದಿನಗಳ ನಂತರ ಮತ್ತೆ ವಿಶೇಷ ತರಗತಿಗಳನ್ನು ನಡೆಸುತ್ತೇವೆ. ಪ್ರೀಲಿಮ್ಸ್‌ ಪರೀಕ್ಷೆ ಉತ್ತೀರ್ಣರಾದವರಿಗೆ ನಮ್ಮ ಪ್ರತಿಷ್ಠಾನದಿಂದ ಸಹಾಯ ಮಾಡಲಾಗುವುದು” ಎಂದು ಹೇಳಿದರು.

ಈಗಾಗಲೇ 1.10 ಲಕ್ಷ ಪರೀಕ್ಷಾ ಆಕಾಂಕ್ಷಿಗಳು ತರಗತಿಗಳಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ದಿನ ನಡೆದ ತರಗತಿಗಳಿಗೆ 70 ಸಾವಿರ ಮಂದಿ ಹಾಜರಾಗಿದ್ದರು.

ಈ ತರಗತಿಗಳನ್ನು ನಡೆಸಲು ಅತ್ಯಾಧುನಿಕ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಪರಿಣತ ಅಧ್ಯಾಪಕರು ತರಗತಿಗಳನ್ನು ನಡೆಸಿಕೊಡಲಿದ್ದಾರೆ. Syllabuswise ಪ್ರತಿ ದಿನ 5 ತರಗತಿಗಳಂತೆ 3 ತಿಂಗಳು ನಡೆಯಲಿದೆ. ಬೆಳಗ್ಗೆ 8 ರಿಂದ 9, 9 ರಿಂದ 10, 10 ರಿಂದ11 ಹಾಗೂ ಸಂಜೆ 6 ರಿಂದ7 & 7 ರಿಂದ 8 ಗಂಟೆವರೆಗೆ ತರಗತಿಗಳು ನಡೆಯಲಿವೆ.

ಸಮಾರಂಭದಲ್ಲಿ ಪಕ್ಷದ ವಕ್ತಾರೆ ಶ್ರೀಮತಿ ಕವಿತಾ ರೆಡ್ಡಿ, ಸಂತೋಷ್‌ ಲಾಡ್‌ ಫೌಂಡೇಶನ್‌ನ ಶ್ರೀ ಆನಂದ ಕಲಾಲ್‌, ಮಜುನಾಥ್ ಮುರಳ್ಳಿ, ಎಸ್ ಆರ್ ಪಾಟೀಲ್, ಕಬ್ಬೇರ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.

Share News

About admin

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *