ಧಾರವಾಡ : ತಾಲ್ಲೂಕಿನ ಲಕ್ಮಾಪುರ ಗ್ರಾಮದಲ್ಲಿ ಶ್ರೀ ದ್ಯಾಮವ್ಬ ಹಾಗೂ ದುರ್ಗಮ್ಮ ಜಾತ್ರೆಯನ್ನು ಗ್ರಾಮಸ್ಥರು ಅದ್ದೂರಿಯಾಗಿ ಆಚರಣೆ ಮಾಡಿದರು.
ಗ್ರಾಮದೇವತೆ ಜಾತ್ರೆ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಗ್ರಾಮದಲ್ಲಿ ಹಬ್ಬದ ವಾತವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರೆಲ್ಲರು ಗ್ರಾಮ ದೇವತೆಗೆ ವಿಶೇಷ ಪೂಜೆ ಸಲ್ಲುಸಿದರು. ಮಹಿಳೆಯರೆಲ್ಲರು ಕುಂಭಮೇಳ ಹಾಗೂ ಆರತಿ ತಟ್ಟೆಯೊಂದಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ದ್ಯಾಮವ್ವ ಮತ್ತು ದುರ್ಗಮ್ಮಾ ದೇವಿಯ ಮೂರ್ತಿಯನ್ನು ಮೆರವಣಿಗೆ ಮಾಡಿದರು.
ಇನ್ನೂ ಇದೇ ವೇಳೆ ಗ್ರಾಮದ ಯುವಕರು ಜಾಂಜ್ ಮೇಳದ ಮೂಲಕ ದೇವಿಯ ಮೆರವಣಿಗೆಯಲ್ಲಿ ಭಾಗವಹಿಸಿ ಅದ್ದೂರಿಯಾಗಿ ಉತ್ಸವದಲ್ಲಿ ಭಾಗಿಯಾದರು. ಗ್ರಾಮಸ್ಥರು ತಮ್ಮ ಮನೆಯ ಬಳಿ ಮೂರ್ತಿ ಬರುತ್ತಿದಂತೆ ಅಂಗಳದಲ್ಲಿ ದೇವರ ಮೂರ್ತಿಗೆ ವಿಶೇಷ ಪುಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

