Breaking News

ರೈತರಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ


ಬೆಂಗಳೂರು: ರೈತರಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.ಕಂದಾಯ ಮತ್ತು ಭೂಮಾಪನ ಇಲಾಖೆಯಿಂದ ಹೊಸ ಯೋಜನೆ ರೂಪಿಸಲಾಗಿದ್ದು, ಪಹಣಿ ಪತ್ರದಲ್ಲಿ ನಕ್ಷೆಯನ್ನು ಕೂಡ ನೀಡಲಾಗುತ್ತದೆ. ಪ್ರಾಯೋಗಿಕವಾಗಿ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ನಂತರ ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ.

ಹೊಸ ಪಹಣಿಯಲ್ಲಿಯೂ ಹಳೆ ಪಹಣಿಯಲ್ಲಿ ಇರುವಂತೆಯೇ ಎಲ್ಲ ವಿವರಗಳು ಇರುತ್ತವೆ. ಎಡಗಡೆ ಡಿಜಿಟಲ್ ಸ್ಕೆಚ್ ಇರಲಿದೆ. ವಿಸ್ತೀರ್ಣ, ಜಮೀನು ಎಲ್ಲಿದೆ?, ಒತ್ತುವರಿ ಮಾಹಿತಿ, ಕ್ಯೂಆರ್ ಕೋಡ್, ಬಾರ್ಕೋಡ್ ಮೊದಲಾದವುಗಳನ್ನು ಒಳಗೊಂಡಂತೆ ಹೊಸ ಪಹಣಿ ರೈತರ ಕೈಸೇರಲಿದೆ.

ಜಮೀನಿನ ನಕ್ಷೆಯನ್ನು ನೋಡಲು ರೈತರು ಭೂದಾಖಲೆಗಳ ಇಲಾಖೆ ಅಲೆದಾಡಬೇಕಿಲ್ಲ. ಪಹಣಿಯಲ್ಲಿಯೇ ಜಮೀನಿನ ನಕ್ಷೆ, ವಿವರಗಳನ್ನು ಒಳಗೊಂಡಂತೆ ಹೊಸ ಪಹಣಿ ನೀಡಲಾಗುತ್ತದೆ.

Share News

About admin

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *