ಬೆಳಗಾವಿ: ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನರನ್ನು ಒಟ್ಟುಗೂಡಿಸಲು ಬೆಳಗಾವಿಯಲ್ಲಿ ಸ್ವತಃ ಲೋಕಮಾನ್ಯ ಬಾಲಗಂಗಾಧರ ತಿಲಕರೇ ಆರಂಭಿಸಿದ್ದ ಸಾರ್ವಜನಿಕ ಗಣೇಶೋತ್ಸವ 119ನೇ ವರ್ಷಕ್ಕೆ ಕಾಲಿಟ್ಟಿದೆ. ಇದು ರಾಜ್ಯದಲ್ಲೇ ಮೊಟ್ಟ ಮೊದಲ ಸಾರ್ವಜನಿಕ ಗಣಪತಿ ಉತ್ಸವ ಮಂಡಳಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಅದು ಬ್ರಿಟಿಷರ ವಿರುದ್ಧ ಚಳುವಳಿ ನಡೆಯುತ್ತಿದ್ದ ಸಂದರ್ಭ. ಹೇಗಾದರೂ ಮಾಡಿ ಜನರನ್ನು ಸಂಘಟಿಸಿ, ಹೋರಾಟ ತೀವ್ರಗೊಳಿಸಬೇಕೆಂಬ ಉದ್ದೇಶದಿಂದ ಮನೆಗಳಿಗೆ ಸೀಮಿತವಾಗಿದ್ದ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ಬಾಲಗಂಗಾಧರ ತಿಲಕರು ಕರೆ ನೀಡಿದ್ದರು. 1893ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಮೊಟ್ಟ ಮೊದಲ ಸಾರ್ವಜನಿಕ ಗಣೇಶೋತ್ಸವ ಆರಂಭಿಸುತ್ತಾರೆ. ನಂತರ ಮುಂಬೈನಲ್ಲೂ ಆರಂಭವಾಗುತ್ತದೆ.
ಇದರ ಪ್ರಭಾವ ಪಕ್ಕದ ಕರ್ನಾಟಕ ರಾಜ್ಯದ ಬೆಳಗಾವಿ ಮೇಲೂ ಬೀರುತ್ತದೆ. 1905ರಲ್ಲಿ ಸ್ವತಃ ತಿಲಕರೇ ಬೆಳಗಾವಿಗೆ ಆಗಮಿಸಿ ಇಲ್ಲಿನ ಝೇಂಡಾ ಚೌಕ್ನ ಶಾಂತಾರಾಮ್ ವಿಷ್ಣು ಪಾಟನೇಕರ್ ಅವರ ಕಿರಾಣಿ ಅಂಗಡಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುತ್ತಾರೆ. ಆಗ ತಿಲಕರಿಗೆ ಸ್ವಾತಂತ್ರ್ಯ ಹೋರಾಟಗಾರರಾದ ಗೋವಿಂದರಾವ್ ಯಾಳಗಿ ಮತ್ತು ಗಂಗಾಧರ ರಾವ್ ದೇಶಪಾಂಡೆ ಸೇರಿ ಮತ್ತಿತರು ಸಾಥ್ ಕೊಟ್ಟಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





