Breaking News

49 ವರ್ಷದ ಸಂಸದ 18 ವಯೋಮಿತಿ ಪೋರಿಯ ಜೊತೆ 3 ನೇ ವಿವಾಹ

49-ವರ್ಷ ವಯಸ್ಸಿನ ಸಂಸದ 18 ವರ್ಷ ವಯಸ್ಸಿನ ಸಾದಿಯಾ ದಾನಿಯಾ ಶಾ ಜೊತೆಗೆ ಮೂರನೇ ಮದುವೆಯಾಗಿದ್ದಾರೆ. ಪಾಕಿಸ್ತಾನದ ಆಡಳಿತಾರೂಢ ಪಿಟಿಐ ಪಕ್ಷದ ಸಂಸದ ಹಾಗೂ ಟಿವಿ ಹೋಸ್ಟ್ ಡಾ. ಆಮೀರ್‌ ಲಿಯಾಕತ್‌ ಹುಸೇನ್ ಮದುವೆಯಾಗಿದ್ದಾರೆ.

ಈ ವಿಚಾರವೀಗ ಪಾಕಿಸ್ತಾನದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಜೋಡಿ ಬುಧವಾರ ಮದುವೆಯಾಗಿದೆ. ಇದೇ ದಿನ ಆಮೀರ್‌ಗೆ ಆತನ ಎರಡನೇ ಮಡದಿ ವಿಚ್ಛೇದನ ನೀಡಿದ್ದಾರೆ.

“ಕಳೆದ ರಾತ್ರಿ ಸಯಿದಾ ದಾನಿಯಾ ಶಾ, ಜೊತೆಗೆ ಮದುವೆ ಮಾಡಿಕೊಂಡೆ. ಆಕೆ ದಕ್ಷಿಣ ಪಂಜಾಬ್‌ನ ಲೋಧ್ರಾನ್‌ನ ಘನವೆತ್ತ ನಜೀಬ್ ಉದ್ ತರ್ಫೇನ್ ‘ಸಾದತ್‌’ ಕುಟುಂಬಕ್ಕೆ ಸೇರಿದವಳು. ಆಕೆ ಚಾರ್ಮಿಂಗ್, ಸಿಂಪಲ್ ಆಗಿರುವ ಡಾರ್ಲಿಂಗ್ ಆಗಿದ್ದಾಳೆ. ನನ್ನೆಲ್ಲಾ ಹಿತೈಷಿಗಳಿಗೆ, ದಯವಿಟ್ಟು ನಮಗಾಗಿ ಪ್ರಾರ್ಥನೆ ಮಾಡಿ ಎಂದು ಕೇಳಲು ಬಯಸುತ್ತೇನೆ. ನಾನೀಗ ತಾನೇ ಒಂದು ಕರಾಳ ಸುರಂಗ ಹಾದು ಬಂದಿದ್ದೇನೆ, ಅದೊಂದು ತಪ್ಪಾದ ತಿರುವು,” ಎಂದು ಹೇಳಿಕೊಂಡಿದ್ದಾರೆ ಆಮೀರ್‌.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *