ಗೋಕರ್ಣ: ಇಲ್ಲಿಯ ಮೇನ್ ಬೀಚಿನಲ್ಲಿರುವ ಕರಿಯಪ್ಪ ಕಟ್ಟೆಯ ಬಳಿ ಖಾಸಗಿ ವಸತಿ ಗೃಹದಲ್ಲಿ ನೆಲೆಸಿದ್ದ ಎಸ್ಟೋನಿಯಾ ದೇಶದ ಪ್ರಜೆ ಕಾಸಿಕ್ ಮಾರ್ಟಿನ್ (45) ಸೋಮವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ.
ಇವರು ಸೋಮವಾರ ಸಂಜೆಯಷ್ಟೇ ಗೋಕರ್ಣಕ್ಕೆ ಬಂದಿದ್ದರು. ಸಾವಿಗೆ ಕಾರಣ ತಿಳಿದು ಬಂದಿಲ್ಲ. ವಸತಿ ಗೃಹದ ಮಾಲೀಕರು ರಾತ್ರಿ ನೋಡಿದಾಗ ಮೃತಪಟ್ಟ ಸ್ಥಿತಿಯಲ್ಲಿದ್ದರು. ಕೂಡಲೇ ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಗೋಕರ್ಣ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆ ಮತ್ತು ಹೆಚ್ಚಿನ ತನಿಖೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

