ಬೆಂಗಳೂರು : ಸಿಂಧೂರು, ತಿಲಕ, ಬಿಂದಿ ಧರಿಸಿದ ವಿದ್ಯಾರ್ಥಿಗಳನ್ನು ತರಗತಿಗೆ ಹಾಜರಾಗದಂತೆ ತಡೆಯುವಂತಿಲ್ಲ. ಸಿಂಧು, ತಿಲಕ, ಬಿಂದಿ, ನಾಮ, ಬಳೆ ಶೃಂಗಾರ ವಸ್ತುಗಳು. ವಿದ್ಯಾರ್ಥಿಗಳನ್ನು ತರಗತಿ ಹೊರಗೆ ನಿಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಒಂದು ವೇಳೆ ವಿದ್ಯಾರ್ಥಿಗಳು ಸಿಂಧೂರ, ತಿಲಕ ಧರಿಸಿ ಬಂದರೆ ಅವರನ್ನು ಶಾಲೆಯೊಳಗೆ ಹೋಗಲು ಬಿಡಬೇಕು. ಒಂದುವೇಳೆ ಆ ವಿದ್ಯಾರ್ಥಿನಿಗಳನ್ನು ತಡೆದರೆ ಅಂತಹ ಶಾಲಾ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಸಿಂಧೂರ, ತಿಲಕ, ನಾಮ, ಬಳೆಗಳು ದೇಶದ ಸಂಸ್ಕೃತಿ. ಈಗ ಸಮವಸ್ತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಅಲಂಕಾರಿಕ ವಸ್ತುಗಳ ಬಗ್ಗೆ ಮಾತನಾಡಿದರೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

