ಹುಬ್ಬಳ್ಳಿ: ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಈ ಸಲದ ದೀಪಾವಳಿಯನ್ನು ಹಲಾಲ್ ಮುಕ್ತ ದೀಪಾವಳಿ ಎಂಬ ಅಭಿಯಾನವನ್ನು ಬೃಹತ್ ಪ್ರಮಾಣದಲ್ಲಿ ನಡೆಸಲಿದ್ದು, ಈ ಹಿನ್ನೆಲೆ ಇಂದು ಸಂಜೆ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಲಾಲ್ ಜಿಹಾದ್ ಕನ್ನಡ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಹಲಾಲ್ ಉತ್ಪಾದನೆಗಳ ಕಡ್ಡಾಯಗೊಳಿಸುವಿಕೆಯ ವಿರುದ್ಧ ಅಂದೋಲನಗಳು ಬಹಿರಂಗ ಕಾರ್ಯಕ್ರಮಗಳು, ಕರಪತ್ರ ಆನ್ ಲೈನ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮುಸ್ಲಿಂ ಅವರಿಂದ ಹಲಾಲ್ ಸರ್ಟಿಪೈಡ್ ಉತ್ಪಾದನೆಗಳನ್ನು ಖರೀದಿ ಮಾಡಬಾರದು ಹಿಂದೂಗಳಿಂದ ಖರೀದಿ ಮಾಡಬೇಕು ಇಲ್ಲದಿದ್ದರೆ ಅಶಾಸ್ತ್ರವಾಗಿತ್ತದೆ ಎಂದರು. ಇನ್ನೂ ಹಲಾಲ್ ದುಡ್ಡು ಭಯೋತ್ಪಾದಕರಿಗೆ ಪೂರೈಕೆಯಾಗುತ್ತಿದ್ದು, ಈ ಹಿನ್ನೆಲೆ ಮುಸ್ಲಿಂ ಅವರಿಂದ ಖರೀದಿ ಎಂದು ಗಂಭೀರವಾಗಿ ಆರೋಪಿಸಿದರು.
ಯಾವುದೇ ಸರ್ಕಾರಿ ಅನುಮತಿಯಿಲ್ಲದೇ ನಡೆಸಲಾಗುತ್ತಿರುವ ಈ ಹಲಾಲ್ ಪ್ರಮಾಣೀಕೃತ ವ್ಯವಸ್ಥೆಯನ್ನು ನಿಲ್ಲಿಸಬೇಕು ಒತ್ತಾಯಿಸಬೇಕು ಎಂದು ಒತ್ತಾಯಿಸಿದರು.
ಹಲ್ದಿರಾಮ, ಹಿಮಾಲಯ, ನೆಸ್ಲೆ ಇವುಗಳಂತಹ ಕಂಪನಿಗಳು ತಮ್ಮ ಸಸ್ಯಾಹಾರಿ ಪದಾರ್ಥಗಳನ್ನು ಸಹ ಹಲಾಲ್ ಸರ್ಟಿಫಿಕೇಟ್ ಗೊಳಿಸಿ ಮಾರಾಟ ಮಾಡುತ್ತಿವೆ. ಹಲಾಲ್ ಏಕೆ ಕಡ್ಡಾಯವಾಗಿದೆ ಎಂದು ಪ್ರಶ್ನೆ ಮಾಡಿದರು. ಹಿಂದೂಗಳಿಗೆ ತಿನ್ನುವ ಅಥವಾ ಖರೀದಿಯ ಸಾಂವಿಧಾನಿಕ ಸ್ವಾತಂತ್ರ್ಯ ಇಲ್ಲವೇನು? ಹಾಗಾಗಿ ಹಿಂದೂ ಸಮಾಜವು ಹಲಾಲ್ ಪ್ರಮಾಣಿತ ಉತ್ಪಾದನೆಗಳನ್ನು ಖರೀದಿಸದೇ ಈ ಸಲದ ದೀಪಾವಳಿಯನ್ನು ಹಿಂದೂ ಪದ್ಧತಿಯಿಂದ ಹಲಾಲ್ ಮುಕ್ತ ದೀಪಾವಳಿ ಎಂದು ಆಚರಿಸಬೇಕು.
ಹಲಾಲ್ ಉತ್ಪಾದನೆಗಳ ಕಡ್ಡಾಯಗೊಳಿಸುವಿಕೆಯ ವಿರುಧ್ಧ ಕರ್ನಾಟಕ ರಾಜ್ಯದ ವಿವಿಧ ಕಡೆಗಳಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಅಂದೋಲನ ಮಾಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ್ ಗೌಡ, ನ್ಯಾ. ರೂಪ ದವಲಗಿ, ಹನುಮಂತಷಾ ನಿರಂಜನ್ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

