Breaking News

ಹಿಜಾಬ್ ವಿವಾದ : ವಿಚಾರಣೆಯನ್ನು ಮುಂದೂಡಿದ ಹೈಕೋರ್ಟ್


ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಇಂದು ಕೂಡ 8ನೇ ದಿನದಂದು ಹೈಕೋರ್ಟ್ ತ್ರಿಸದಸ್ಯ ಪೂರ್ಣ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಸರ್ಕಾರದ ಪರ ವಾದ ಹಾಗೂ ಶಿಕ್ಷಕರ ಪರ ವಾದವನ್ನು ಆಲಿಸಿದಂತ ನ್ಯಾಯಪೀಠವು, ಅರ್ಜಿಯ ವಿಚಾರಣೆ ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರನ್ನೊಳಗೊಂಡ ಪೀಠದ ಮುಂದೆ ಇಂದು ಕೂಡ ಹಿಜಾಬ್ ಅನುಮತಿ ಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆಯನ್ನು ನಡೆಸಿತು. ಮುಖ್ಯನ್ಯಾಯಮೂರ್ತಿಗಳು ಲಿಖಿತ ಸಲ್ಲಿಕೆಗಳನ್ನು ಮಾಡುವಂತೆ ನಾನು ಎಲ್ಲಾ ಮಧ್ಯಸ್ಥಿಕೆದಾರರನ್ನು ವಿನಂತಿಸುತ್ತೇನೆ.

ನಮಗೆ ಸಹಾಯದ ಅಗತ್ಯವಿಲ್ಲ, ಆದರೆ ಅನೇಕ ಮಧ್ಯಸ್ಥಿಕೆದಾರರು ಬಂದಿರುವುದರಿಂದ, ಲಿಖಿತ ಸಲ್ಲಿಕೆಗಳನ್ನು ನೀಡಲು ನಾವು ವಿನಂತಿಸುತ್ತೇವೆ. ನಾವು ಈ ವಿಷಯವನ್ನು ಆರು ತಿಂಗಳವರೆಗೆ ಕೇಳಲು ಸಾಧ್ಯವಿಲ್ಲ ಎಂದರು.

Share News

About admin

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *