Breaking News

ಸಿಹಿ ನೆಪದಲ್ಲಿ ಸೈನೆಡ್ ಕೊಟ್ಟು ಕೊಲೆ; ಅಪರಾಧಿಗೆ ಜೀವಾವಧಿ ಶಿಕ್ಷೆ!!

ಫೇಸ್ ಬುಕ್ ನಲ್ಲಿ ಬೈಕ್ ಮಾರಾಟಕ್ಕೆ ಇಟ್ಟಿದ್ದ ಯುವಕನ್ನು ಗ್ರಾಹಕನ ಸೋಗಿನಲ್ಲಿ ಭೇಟಿ ಮಾಡಿ, ವಾಹನ ಖರೀದಿ ನೆಪದಲ್ಲಿ ಸಿಹಿ ಎಂದು ಸೈನೆಡ್ ತಿನ್ನಿಸಿ ಕೊಲೆ ಮಾಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಂಗಳೂರು ಗ್ರಾಮಾಂತರ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.ಫೇಸ್ ಬುಕ್ ನಲ್ಲಿ ಎಟಿಎಂ ಬೈಕ್ ಮಾರಾಟಕ್ಕಿದೆ ಎಂದು ಜಾಹೀರಾತು ಪೋಸ್ಟ್ ಮಾಡಿದ್ದರು. ಇದನ್ನು ನೋಡಿದ ಕಾರ್ತಿಕ್, ಬೆಲೆ ಬಾಳುವ ವಸ್ತುಗಳನ್ನು ದೋಚುವ ಉದ್ದೇಶಕ್ಕೆ ಬೈಕ್ ಖರೀದಿ ಮಾಡುವುದಾಗಿ ಸೋಹನ್‌ಗೆ ಕರೆ ಮಾಡುತ್ತಾನೆ. ಮನೆ ವಿಳಾಸ ಪಡೆದ ಕಾರ್ತಿಕ್, ಕೊಲೆ ಮಾಡುವ ಉದ್ದೇಶದಿಂದ ಸಿಲ್ವರ್ ಪೊಟಾಶಿಯಂ ಸೈನೆಡ್ ಅನ್ನು ಖರೀದಿ ಮಾಡಿಕೊಂಡು ್ಲ್ಯಾಟ್‌ಗೆ ಹೋಗಿ ಸೋಹನ್ ಭೇಟಿ ಮಾಡಿ ಮಾತುಕತೆ ನಡೆಸುತ್ತಾನೆ. ಕೊನೆಗೆ ಬೈಕ್ ಖರೀದಿ ಖುಷಿಯಲ್ಲಿ ಸಿಹಿ ತಿನ್ನಿಸುವುದಾಗಿ ಹೇಳಿ ಸಕ್ಕರೆ ಎಂದುಹೇಳಿ ಸೈನೆಡ್ ಅನ್ನು ಸೋಹನ್ ಬಾಯಿಗೆ ಹಾಕಿ ಕೊಲೆ ಮಾಡುತ್ತಾನೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *