Breaking News

ಉಕ್ರೇನ್ ದಾಳಿಯಲ್ಲಿ 800 ರಷ್ಯಾ ಯೋಧರು ಸಾವು


ರಷ್ಯಾ, ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ವೇಳೆ ಉಕ್ರೇನ್ ದಾಳಿಯಲ್ಲಿ 800 ರಷ್ಯಾ ಯೋಧರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕೀ ಮಾಹಿತಿ ನೀಡಿದ್ದಾರೆ.

ಕೀವ್ ಬಳಿ ಎರಡು ರಷ್ಯಾ ವಿಮಾನ ಹೊಡೆದುರುಳಿಸಲಾಗಿದೆ. 30 ಯುದ್ಧ ಟ್ಯಾಂಕರ್ ಧ್ವಂಸಗೊಳಿಸಲಾಗಿದೆ. ರಷ್ಯಾದ 2 ವಿಮಾನ, 6 ಹೆಲಿಕಾಪ್ಟರ್ ಗಳನ್ನು ನಾಶ ಮಾಡಲಾಗಿದೆ.

ರಷ್ಯಾ ದಾಳಿಗೆ 137 ಸಾವು ಕಂಡಿದ್ದು, 316 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ರಷ್ಯಾ ಸೇನೆ ತಡೆಯೊಡ್ಡಿದೆ. ಆಸ್ಪತ್ರೆಗಳ ಮೇಲೆ ದಾಳಿ ಮಾಡಿದೆ. ಉಕ್ರೇನ್ ಚರ್ನೋಬಿಲ್ ಅಣುಸ್ಥಾವರವನ್ನು ರಷ್ಯಾ ವಶಕ್ಕೆ ಪಡೆದುಕೊಂಡಿದೆ ಎಂದು ಉಕ್ರೇನ್ ಸರ್ಕಾರದಿಂದ ಮಾಹಿತಿ ನೀಡಲಾಗಿದೆ.

Share News

About admin

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *