Breaking News

ಮಗಳನ್ನು ವಶೀಕರಣ ಮಾಡಿ ಮದ್ವೆ ಮಾಡಿಸಿದ್ದಾರೆ… ಗಾಯಕಿ ಪೃಥ್ವಿ ಭಟ್‌ ತಂದೆ ಆರೋಪ!

ಕನ್ನಡ ಕಿರುತೆರೆಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ ಸೀಸನ್ 15’ರ ಸ್ಪರ್ಧಿಯಾಗಿ ಮತ್ತು ಆ ಬಳಿಕ ಕಿರುತೆರೆಯ ಕೆಲವು ಧಾರಾವಾಹಿಗಳ ಹಾಡಿನ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಪೃಥ್ವಿ ಭಟ್ ಅವರು ಅಪ್ಪ ಅಮ್ಮನ ವಿರೋಧವನ್ನೂ ಲೆಕ್ಕಿಸದೆ ಮನೆ ತೊರೆದು ಪ್ರೀತಿಸಿದವನ ಜತೆ ಮದುವೆಯಾಗಿದ್ದಾರೆ. ಇದರಿಂದ ಮನನೊಂದ ಅಪ್ಪ ಸುದೀರ್ಘ ಆಡಿಯೊ ಮಾಡಿ ನೋವು ತೋಡಿಕೊಂಡಿದ್ದಾರೆ. ಅಭಿಷೇಕ್ ಎನ್ನುವ ಯುವಕನೊಂದಿಗೆ ಪೃಥ್ವಿ ಭಟ್ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಗಳ ಮದುವೆ ವಿಚಾರ ತಿಳಿದು ಪೋಷಕರು ಆಘಾತ ವ್ಯಕ್ತಪಡಿಸಿದ್ದಾರೆ. ತಮ್ಮ ಮಾತನ್ನು ಧಿಕ್ಕರಿಸಿ ಮಗಳು ಮದುವೆಯಾಗಿದ್ದಾಳೆ. ಆ ಹುಡುಗನ ಜೊತೆ ಮದುವೆಯಾಗುವುದಿಲ್ಲ ಎಂದು ದೇವರ ಮುಂದೆ ನಿಂತು ಪ್ರಮಾಣ ಮಾಡಿದ್ದಳು.ಆದರೆ ಇದ್ದಕ್ಕಿದ್ದಂತೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಮಗಳ ಮೇಲೆ ವಶೀಕರಣ ವಿದ್ಯೆ ಪ್ರಯೋಗಿಸಲಾಗಿದೆ. ಇದರ ಹಿಂದೆ ಜೀ ಕನ್ನಡ ರಿಯಾಲಿಟಿ ಜ್ಯೂರಿ ನರಹರಿ ದೀಕ್ಷಿತ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

Share News

About BigTv News

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *