ಹುಬ್ಬಳ್ಳಿ : ಉಕ್ರೇನ್ ನಲ್ಲಿ ಧಾರವಾಡ ಜಿಲ್ಲೆಯ ಮತ್ತೋರ್ವ ವಿದ್ಯಾರ್ಥಿನಿ
ಸಿಲುಕಿಕೊಂಡಿದ್ದಾಳೆ. ಹುಬ್ಬಳ್ಳಿಯ ಶಾಂತಿನಗರದ ನಿವಾಸಿ ನಾಝಿಲಾ ಗಾಜಿಪುರ ಉಕ್ರೇನ್ ನಲ್ಲಿ ಸಿಲುಕಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ.
ಎಂಬಿಬಿಎಸ್ ವ್ಯಾಸಂಗ ಮಾಡಲೆಂದು ಫೆ. 09 ಕ್ಕೆ ಉಕ್ರೇನ್ ಗೆ ತೆರಳಿದ್ದ ನಾಝೀಲಾ, 15 ದಿನ ಕಳೆಯುವುದರೊಳಗಾಗಿ ಆತಂಕದ ಕ್ಷಣಗಳನ್ನು ಎದುರಿಸುವಂತಾಗಿದೆ. ವಿಮಾನ ಹಾರಾಟ ರದ್ದಾದ ಹಿನ್ನೆಲೆ, ವಾಪಸ್ಸಾಗೋಕೆ ಪ್ರಾಯಾಸಪಡುವಂತಾಗಿದೆ. ಉಕ್ರೇನಿನ್ ಕಾಲೇಜು ವಸತಿ ಗೃಹದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ನಾಝಿಲಾ ಕುಟುಂಬದ ಸದಸ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಪೋಷಕರು ಆತಂಕದಲ್ಲಿದ್ದಾರೆ. ಮಗಳು ಸುರಕ್ಷಿತವಾಗಿ ಮರಳಲಿ ಅಂತ ತಾಯಿಯ ಅಭಿಲಾಷೆಯಾಗಿದೆ. ಮಗಳು ಉಕ್ರೇನ್ ದಲ್ಲಿ ಆತಂಕದ ವಾತಾವರಣದಲ್ಲಿದ್ದಾಳೆ. ಎಂಬಿಬಿಎಸ್ ವ್ಯಾಸಂಗ ಮಾಡಲೆಂದು ಹೋಗಿದಾಳೆ. ವಸತಿ ಗೃಹದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಕೂಡಲೇ ಮಗಳನ್ನು ಕರೆಸಿಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಸರ್ಕಾರಕ್ಕೆ ನಾಝೀಲಾ ತಾಯಿ ನೂರ್ ಜಹಾನ್ ಮನವಿ ಮಾಡಿದ್ದಾಳೆ. ಈಗಾಗಲೇ ತಹಶೀಲ್ದಾರರನ್ನು ಭೇಟಿ ಮಾಡಿರೋ ನೂರ್ ಜಹಾನ್, ತನ್ನ ಆತಂಕವನ್ನು ಅವರ ಮುಂದೆ ಹೇಳಿಕೊಂಡಿದ್ದಾಳೆ. ಆದಷ್ಟು ಬೇಗ ಮಗಳನ್ನು ತಾಯ್ನಾಡಿಗೆ ಕರೆಯಿಸಲು ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡು ಬಂದಿದ್ದಾಳೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

