ಬೆಂಗಳೂರು: ರಷ್ಯಾ ನಡೆಸಿದ ಶೆಲ್ ನಲ್ಲ ನಡೆದ ದಾಳಿಯಲ್ಲಿ ಭಾರತಿಯ ವಿದ್ಯಾರ್ಥಿ ನವೀನ್ ಮೃತಪಟ್ಟಿದ್ದು ವಿಷಾದಿನಿಯ. ನವೀನ್ ಸಾವಿನ ಸಂಬಂಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದರು. ವಿದ್ಯಾರ್ಥಿಯ ಸಾವಿಗೆ ಕೇಂದ್ರ ಸರಕಾರದ ನಿರ್ಲ್ಯಕ್ಷವೇ ಕಾರಣ ಎಂದು ಸಿದ್ದರಾಮಯ್ಯ ದೂರಿದ್ದರು.
“ಉಕ್ರೇನ್‌ನಲ್ಲಿ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್ ಸಾವಿಗೆ ಯುದ್ದದಾಹಿ ರಷ್ಯಾ ಸೇನೆ ಎಷ್ಟು ಹೊಣೆಯೋ, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಸಕಾಲದಲ್ಲಿ ನೆರವಾಗದೆ ನಿರ್ಲಕ್ಷಿಸಿದ @PMOIndia ಮತ್ತು @BJP4India ಸರ್ಕಾರವೂ ಅಷ್ಟೇ ಹೊಣೆ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಸಿದ್ದರಾಮಯ್ಯನವರ ಈ ಪೋಸ್ಟಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇಂತಹ ಸಮಯದಲ್ಲೂ ರಾಜಕೀಯ ಮಾಡುತ್ತಿದ್ದೀರಾ ಎಂದು ಟ್ವಿಟ್ಟಿಗರು ಪ್ರಶ್ನಿಸಿದ್ದಾರೆ. ‘ರಾಜಕೀಯ ಬಿಟ್ಟು ಮನುಷ್ಯನಂತೆ ವರ್ತಿಸಿ’ ಎನ್ನುವ ಬುದ್ದಿಮಾತುಗಳೂ ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

