Breaking News

ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ


ಬೆಂಗಳೂರು : ದ್ವಿತೀಯ ಪಿಯು ಪರೀಕ್ಷೆ ಮತ್ತು ಎನ್‌ಟಿ‌ಎ ನಡೆಸುವ ಜೆಇಇ ಪರೀಕ್ಷೆಯ ಕೆಲ ವಿಷಯಗಳು ಒಂದೇ ದಿನಾಂಕದಂದು ಬಂದಿರುವ ಕಾರಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ವೇಳಾಪಟ್ಟಿ (ತಾತ್ಕಾಲಿಕ) ಪರಿಷ್ಕರಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಟ್ವೀಟ್‌ ಮಾಡಿದ್ದಾರೆ.

ಏ.22ರಿಂದ ಮೇ 11ರವರೆಗೆ ಪರೀಕ್ಷೆ ನಡೆಯಲಿದೆ. ವೇಳಾಪಟ್ಟಿಯ ಪ್ರಕಾರ, ಏ.22ರಂದು ವ್ಯವಹಾರ ಅಧ್ಯಯನ, 23ರಂದು ಹಿಂದಿ, 25ರಂದು ಅರ್ಥಶಾಸ್ತ್ರ, 26ರಂದು ರಸಾಯನವಿಜ್ಞಾನ, 27ರಂದು ಸಂಸ್ಕೃತ, 28ರಂದು ಕನ್ನಡ, 30ರಂದು ಸಮಾಜಶಾಸ್ತ್ರ, ಮೇ 2ರಂದು ಭೂಗೋಳಶಾಸ್ತ್ರ, ಮೇ 4ರಂದು ಇಂಗ್ಲಿಷ್‌, 6ರಂದು ಗಣಿತ, 7ರಂದು ಭೂವಿಜ್ಞಾನ ಮತ್ತು ಐಚ್ಛಿಕ ಕನ್ನಡ ಹಾಗೂ ಲೆಕ್ಕಶಾಸ್ತ್ರ, 9ರಂದು ಇತಿಹಾಸ ಮತ್ತು ಭೌತವಿಜ್ಞಾನ, ಮೇ 11ರಂದು ರಾಜ್ಯಶಾಸ್ತ್ರ, ಸಂಖ್ಯಾ ಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.

ಈ ವೇಳಾಪಟ್ಟಿಗೆ ಆಕ್ಷೇಪಗಳನ್ನು ಸಲ್ಲಿಸಲು ಮಾರ್ಚ್‌ 5ರ ಸಂಜೆ 5ರವರೆಗೆ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಗಳನ್ನು jdexam.dpue@gmail.com ಇ-ಮೇಲ್‌ಗೆ ಮಾತ್ರ ಕಳುಹಿಸಬೇಕು. ಅಂಚೆ ಮೂಲಕ ಹಾಗೂ ನಿಗದಿಪಡಿಸಿದ ದಿನಾಂಕದ ನಂತರ ಬರುವ ಆಕ್ಷೇಪಗಳನ್ನು ಪರಿಗಣಿಸುವುದಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.

Share News

About admin

Check Also

ಜೊಂಬಿ ಡ್ರಗ್ಸ್ ಸುಳ್ಳು ಸುದ್ದಿ, ವಿಡಿಯೋ ವೈರಲ್ ಮಾಡಿದವನನ್ನ ಅರೆಸ್ಟ್ ಮಾಡಲಾಗಿದೆ : ಜಿ.ಪರಮೇಶ್ವರ್

ಬೆಂಗಳೂರು : ಜೊಂಬಿ ಡ್ರಗ್ಸ್ ಸೇವಿಸುತ್ತಿದ್ದ ಎಂಬ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಮಿಷನರ್ ರಿಂದ ಪ್ರಕರಣದ ಬಗ್ಗೆ ಮಾಹಿತಿ …

Leave a Reply

Your email address will not be published. Required fields are marked *