ಹುಬ್ಬಳ್ಳಿ: ದೇಶದಲ್ಲಿ ಎಲ್ಲ ಧರ್ಮದವೂ ಒಂದೆಯಾಗಿದೆ. ಸಂವಿಧಾನ ಮತ್ತು ಕಾನೂನಿಗಿಂತ ಯಾರು ದೊಡ್ಡವರಲ್ಲ. ಆದರೆ ಇತ್ತೀಚೆಗೆ ಇಂತಹ ಗಲಭೆ ಗಳು ರಾಜ್ಯದಲ್ಲಿ ನಡೆಯುತ್ತಿದೆ. ಇದು ಮುಂದೆಯಾಗದಂತೆ ಜನಸಾಮಾನ್ಯರು ಶಾಂತಿಯುತವಾಗಿರಬೇಕು ಎಂದು ಬೆಂಗಳೂರಿನ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಹಿಂಸಾತ್ಮಕ ಘಟನೆ ನಡೆದಿದೆ. ಇದು ಸಮಾಜಕ್ಕೆ ಮಸಿ ಬಳೆಯುವಂತಾಗಿದೆ. ಹಿಂದಿನ ಕಾಲದಿಂದಲೂ ಸರ್ವಧರ್ಮ ಸಮನ್ವಯತೆಯಿಂದ ನಡೆದುಕೊಂಡು ಬಂದಿದ್ದೇವೆ ಎಂದರು.
ದೇಶದಲ್ಲಿ ಸಂವಿಧಾನದಂತೆ ನಡೆಯಬೇಕು. ಎಲ್ಲ ಧರ್ಮದವರು ಎಲ್ಲ ಧರ್ಮ ಪಾಲನೆ ಅಳವಡಿಕೆ ಮಾಡಬೇಕು. ಮಸೀದಿಗೆ ಲಿಂಗ ಪೂಜೆ ಮಾಡಬೇಕು. ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲು ಮುಸ್ಲಿಂ ಸಮುದಾಯದವರು ಬರಬೇಕು ಎಂದು ಹೇಳುವ ಮೂಲಕ ಒಟ್ಟಾಗಿ ಸಹಬಾಳ್ವೆ ಸಹಬಾಳ್ವೆ ನಡೆಸಲು ಶಾಂತಿ ಸಂದೇಶಕ್ಕೆ ಕರೆ ನೀಡಿದರು.
ಮುಸ್ಲಿಂ ಸಮಾಜದ ಮುಖಂಡ ಅಬ್ದುಲ್ ರಜಾಕ್ ಮಾತನಾಡಿ, ಹಿಂದಿನಿಂದಲೂ ಹಿಂದೂ – ಮುಸ್ಲಿಂ ಸಮುದಾಯದವರು ಒಂದೇಯಾಗಿ ಬಾಳುತ್ತಿದ್ದು, ಮುಂದೆಯೂ ಇದೇ ರೀತಿ ಇರೋಣ. ತಪ್ಪು ಮಾಡಿದವರಿಗೆ ಕಾನೂನು ಶಿಕ್ಷೆ ನೀಡುತ್ತದೆ. ಯಾರೂ ಕಾನೂನು ಕೈ ತಗೆದುಕೊಳ್ಳಬಾರದು. ಹು-ಧಾ ಮೊದಲಿನಂತೆ ಶಾಂತವಾಗಬೇಕು.
ಮೊದಲಿನಂತೆ ಎಲ್ಲರೂ ಚೆನ್ನಾಗಿರಬೇಕೆಂದರು.
ಬೈಲಹೊಂಗಲದ ಶಿವಾನಂದ ಸ್ವಾಮಿಜಿಗಳು ಮಾತನಾಡಿ, ರಾಜ್ಯದಲ್ಲಿ ಇಂತಹ ಹಲವಾರು ಘಟನೆಗಳು ನಡೆಯುತ್ತಿಧ್ದು, ಹಿಂದೂ-ಮುಸ್ಲಿಂ ಸಮುದಾಯದಲ್ಲಿ ಬೇಧ ಭಾವ ಹೆಚ್ಚಾಗುತ್ತಿದ್ದು, ಇದರಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ಹಿಂದೂ ಮುಸ್ಲಿಂ ಸಮುದಾಯದವರು ಸರ್ವ ಧರ್ಮದವರಾಗಿ ಒಂದೇ ಎಂದು ನಡೆದರೇ ಯಾವುದೇ ರೀತಿಯಾಗಿ ಇಂತಹ ಘಟನೆಗಳು ನಡೆಯುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹುಬ್ಬಳ್ಳಿಯ ಬೃಹನ್ ಹೊಸಮಠದ. ಚಂದ್ರಶೇಖರ ಸ್ವಾಮಿಜಿ, ಹಜರತ್ ಸಹ್ಯದ್ ಅಹಮ್ಮದ್ ರಜಾಕ್, ಹಜರತ್ ಸಯ್ಯದ್ ಮಿಜಾರ್ ಅಹ್ಮದ್,, ಮೌಲಾನಾ ನಿಸಾರ್ ಅಹಮದ್, ಆಸ್ಪಾಕ ಕುಮಟಾಕರ್ ಸೇರಿದಂತೆ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

