Breaking News

ಅಕ್ರಮವಾಗಿ ಗ್ಯಾಸ್ ವರ್ಗಾವಣೆ ; ಓರ್ವ ಅರೆಸ್ಟ್

ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಮಸೀದಿ ಬಳಿ , ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ನಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗೆ ಅಕ್ರಮವಾಗಿ ಅನಿಲ ವರ್ಗಾವಣೆ ಮಾಡುತ್ತಿದ್ದ

ಅಡ್ಡೆ ಮೇಲೆ ಕಸಬಾಪೇಟೆ ಪೊಲೀಸರು ದಾಳಿ ಮಾಡಿ ಓರ್ವನನ್ನು ಬಂಧಿಸಿದ್ದಾರೆ . ಮೊಹಮ್ಮದ್ ಮದರಂಗಿ ಬಂಧಿತ ಆರೋಪಿ .

ಈತನಿಂದ ಅಂದಾಜು 1,32,400 ರೂ . ಮೌಲ್ಯದ ಅನಿಲ ತುಂಬಿದ ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ತಲಾ 6 ಸಿಲಿಂಡರ್ ಹಾಗೂ ಗೃಹ ಬಳಕೆಯ 13 ಮತ್ತು ವಾಣಿಜ್ಯ ಬಳಕೆಯ 19 ಖಾಲಿ ಸಿಲಿಂಡರ್ , 8 ರೆಗ್ಯುಲೇಟರ್ , ಒಂದು ತೂಕದ ಯಂತ್ರ ವಶಪಡಿಸಿಕೊಳ್ಳಲಾಗಿದೆ . ಪಡಿತರ ಇಲಾಖೆಯ ಆಹಾರ ನಿರೀಕ್ಷಿಕರು ಕಸಬಾಪೇಟೆ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *