Breaking News
Featured Video Play Icon

ಉಕ್ರೇನ್ ಯುದ್ಧ ಭೂಮಿಯಲ್ಲಿ ನಿಂತು ಭಾರತದಲ್ಲಿರುವ ತಾಯಿಗೆ ಧೈರ್ಯ ತುಂಬಿದ ಯುವತಿ

ಹುಬ್ಬಳ್ಳಿ : ಉಕ್ರೇನ್ ಯುದ್ಧ ಭೂಮಿಯಲ್ಲಿ ನಿಂತು ಭಾರತದಲ್ಲಿರುವ ತಾಯಿಗೆ ಹುಬ್ಬಳ್ಳಿಯ MBBS ವಿದ್ಯಾರ್ಥಿನಿ ಧೈರ್ಯ ತುಂಬಿದ್ದಾಳೆ. ಹುಬ್ಬಳ್ಳಿಯ ಶಾಂತಿನಗರ ನಿವಾಸಿ ನಾಝೀಲಾ ಉಕ್ರೇನ್ ನಲ್ಲಿ ಸಿಲುಕಿದ್ದು, ತನ್ನ ತಾಯಿ ನೂರ್ ಜಹಾನ್ ಗಾಜಿಪುರಗೆ ವಾಟ್ಸ್ ಆಪ್ ವಾಯ್ಸ್ ಮೇಸಜ್ ಕಳುಹಿಸಿ ಧೈರ್ಯ ತುಂಬಿದ್ದಾಳೆ.

ಕಳೆದ ಎರಡು ದಿನಗಳಿಂದ ಪಾಲಕರ ಜೊತೆಗೆ ನಿರಂತರವಾಗಿ ಫೋನ್ ಸಂಪರ್ಕದಲ್ಲಿರುವ ನಾಝಿಲಾ ನಾನು ಗಡಿ ದಾಟಿದ್ದು, ಉಕ್ರೇನ್ ಹಂಗೇರಿ ಪೋಲಿಸರ ಜೊತೆಗೆ ಶೆಫ್ ಆಗಿದ್ದೇನೆ.ನನಗೆ ಈಗ ಉಪಹಾರ ನೀಡಿದ್ದಾರೆ, ವಿಶ್ರಾಂತಿ ಪಡೆಯಲು ಅವಕಾಶ ಕೊಟ್ಟಿದ್ದಾರೆ. ಭಾರತೀಯ ರಾಯಭಾರಿಯವರು ಇಲ್ಲಿಗೆ ಬಂದು ನಮ್ಮನ್ನು ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾರೆ. ಸದ್ಯ ಸೀಮ್ ನೆಟ್ವರ್ಕ್ ಇಲ್ಲ, ಸದ್ಯ ವೈಫೈ ಕನೆಕ್ಟ್ ಮಾಡಿಕೊಂಡು ಮಾತನಾಡುತ್ತಿದ್ದೇನೆ. ನನ್ನ ಬಗ್ಗೆ ಯೋಚನೆ ಮಾಡಬೇಡಿ, ನೀವು ಆರಾಮವಾಗಿ ಇರಿ, ನಾನು ಹುಷಾರಾಗಿ ದೇಶಕ್ಕೆ ಮರಳುತ್ತೇನೆ ಎಂದು ತಾನು ಕಷ್ಟದಲ್ಲಿದ್ದರೂ ತಾಯಿಗೆ ಧೈರ್ಯ ತುಂಬಿದ್ದಾಳೆ.

Share News

About admin

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *