Breaking News

ಪೆಟ್ರೋಲಿಯ ಬೆಲೆ ಹೆಚ್ಚಳ ಕುರಿತು ಜನರಲ್ಲಿ ಆತಂಕ ಸೃಷ್ಟಿ


ಹುಬ್ಬಳ್ಳಿ : ಕೊರೊನಾದಿಂದ ಜನರು ಈಗಾಗಲೇ ತತ್ತರಿಸಿ ಹೋಗಿದ್ದಾರೆ. ಈಗ ಮತ್ತೆ ದಿನಸಿ ವಸ್ತುಗಳು ಹಾಗೂ ತೈಲ ಬೆಲೆ ಏರಿಕೆ ಆಗುವುದರಿಂದ ನಿತ್ಯದ ಜೀವನ ನಡೆಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಈ ಹಿನ್ನಲೆ ಮತ್ತೇ ಹುಬ್ಬಳ್ಳಿ ಜನರಲ್ಲಿ ಹೊಸ ಆತಂಕ ಸೃಷ್ಟಿ ಆಗಿದೆ.

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಹಿನ್ನೆಲೆಯಲ್ಲಿ ಭಾರತದಲ್ಲಿ ತೈಲ ಬೆಲೆ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂಬ ಚರ್ಚೆ ಪ್ರಾರಂಭವಾದ ಪರಿಣಾಮ ಸಾರ್ವಜನಿಕರಲ್ಲಿ ಮತ್ತೇ ಹೊಸ ಆತಂಕ ಪ್ರಾರಂಭವಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ರೀತಿಯ ದಿನಸಿ ವಸ್ತು ಅಥವಾ ಪೆಟ್ರೋಲ್ ಡಿಸೇಲ್ ಬೆಲೆಯನ್ನು ಹೆಚ್ಚಳ ಮಾಡಬಾರದು. ದಿನನಿತ್ಯ ದುಡಿದ ಹಣವನ್ನು ಪೆಟ್ರೋಲ್ ಗೆ ಹಾಕಿದರೆ ಹೊಟ್ಟೆಗೆ ಏನು ತಿನ್ನುವುದು ಎಂದು ವಾಣಿಜ್ಯ ನಗರದ ಜನತೆ ಸರ್ಕಾರಕ್ಕೆ ಯಕ್ಷ ಪ್ರಶ್ನೆ ಮಾಡುತ್ತಿದ್ದಾರೆ.

Share News

About admin

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *