Breaking News

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆ: ದತ್ತಪೀಠದಲ್ಲಿ 2 ಅಡಿ ನಿಂತ ನೀರು

ಚಿಕ್ಕಮಗಳೂರು: ರಾಜ್ಯದೆಲ್ಲೆಡೆ ಅಕ್ಟೋಬರ್‌ ತಿಂಗಳಿನಲ್ಲಿ ಹಿಂಗಾರು ಮಳೆ ಹೆಚ್ಚಾಗಿದೆ ವಿಶೇಷವಾಗಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆ ದಾಖಲಾಗಿದೆ. ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಮುಳ್ಳಯ್ಯನಗಿರಿಯ ದತ್ತಪೀಠದಲ್ಲಿ 2 ಅಡಿ ಮಳೆ ನೀರು ನಿಂತುಕೊಂಡಿದೆ.
ಹಿಂಗಾರು ಮಳೆಗೆ ಪಶ್ಚಿಮಘಟ್ಟಗಳ ತಪ್ಪಲು ಅಲ್ಲೋಲ-ಕಲ್ಲೋಲವಾಗಿದೆ. ಕಳೆದ ದಿನ ಸುರಿದ ಭಾರೀ ಮಳೆಗೆ ದತ್ತಪೀಠದ ರಸ್ತೆಯಲ್ಲಿ 2 ಅಡಿ ಎತ್ತರದಲ್ಲಿ ಮಳೆ ನೀರು ಹರಿದಿದೆ. ಮಳೆರಾಯನ ಅಬ್ಬರಕ್ಕೆ ಪ್ರವಾಸಿಗರು ತೊಯ್ದು ತೊಪ್ಪೆಯಾಗಿದ್ದಾರೆ ಮಳೆ ಮಧ್ಯೆ ಸಿಲುಕಿದ ಪ್ರವಾಸಿಗರು ಮುಳ್ಳಯ್ಯನಗಿರಿ ಸಹವಾಸವೇ ಬೇಡ ಎನ್ನುವಷ್ಟು ಬೆದರಿ ಹೋಗಿದ್ದಾರೆ.
ಸಾವಿರಾರು ಅಡಿ ಆಳ ಇರುವ ಮುಗಿಲೆತ್ತರದ ಬೆಟ್ಟಗುಡ್ಡಗಳ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆರಾಯನ ಅರ್ಭಟ ನಿಲ್ಲುತ್ತಲೇ ಇಲ್ಲ. ಆದರೆ ಎಷ್ಟೇ ಮಳೆ ಸುರಿದರೂ ನೀರು ಹರಿದು ಹೋಗುತ್ತದೆ. ಆದರೀಗ ಹಿಂಗಾರು ಮಳೆ ಅಬ್ಬರಕ್ಕೆ ಅಂತಹಾ ಪಶ್ಚಿಮ ಘಟ್ಟವೇ ಬೆದರಿ ಹೋಗಿದೆ ಮುಗಿಲೆತ್ತರದ ಬೆಟ್ಟಗಳ ಮೇಲೆ 2 ಅಡಿ ನೀರು ನಿಂತಿದೆ.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *