‘ರೇಪ್ನಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿ ಇದೆ. ಯಾಕೆ ನಾವು ನಂಬರ್ ಒನ್ ಸ್ಥಾನದಲ್ಲಿದ್ದೇವೆ..? ಯಾಕಂದರೆ ರಾಜಸ್ಥಾನ ಪುರಷರಿರುವ ರಾಜ್ಯ. ಅದಕ್ಕೆ ನಾವೇನು ಮಾಡೋಕೆ ಆಗುತ್ತೆ..?’ ಎಂದು ರಾಜಸ್ಥಾನದ ಕಾಂಗ್ರೆಸ್ ಮಂತ್ರಿ ಶಾಂತಿ ಕುಮಾರ್ ಧರಿವಾಲ್ ಹೇಳಿದ್ದಾರೆ.
ಧರಿವಾಲ್ ಸದನದಲ್ಲಿ ಈ ಹೇಳಿಕೆ ನೀಡಿದಾಗ ಸದನದಲ್ಲಿ ಕುಳಿತಿದ್ದ ಆಡಳಿತ ಪಕ್ಷದ ನಾಯಕರೂ ನಗೆಗಡಲಲ್ಲಿ ತೇಲಿದ್ದಾರೆ. ಅವರ ಹೇಳಿಕೆಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು. ಬಳಿಕ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿಯ ವಿರೋಧಕ್ಕೆ ಮತ್ತೆ ಉತ್ತರಿಸಿದ ಧರಿವಾಲ್, ಅತ್ಯಾಚಾರ ಪ್ರಕರಣದಲ್ಲಿ ನಾವೇ ನಂಬರ್ ಒನ್, ಇದರಲ್ಲಿ ಯಾವುದೇ ಅನುಮಾನವಿಲ್ಲ. ಯುಪಿ ಎರಡನೇ ಸ್ಥಾನದಲ್ಲಿದೆ ಮತ್ತು ಮಧ್ಯಪ್ರದೇಶ ಮೂರನೇ ಸ್ಥಾನದಲ್ಲಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

