Breaking News

ಸಭಾಪತಿಗಳ ವಿರುದ್ಧ ಎಫ್‌ಐಆರ್‌ ದಾಖಲು : ತಪ್ಪಿತಸ್ಥ ಅಧಿಕಾರಿ ಅಮಾನತು ಗೊಳಿಸುವಂತೆ ಒತ್ತಾಯ

ಬೆಂಗಳೂರು: ಸಭಾಪತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವ ಮೂಲಕ ಪೀಠಕ್ಕೆ ಅಪ ಮಾನ ಮಾಡಿದ್ದಾರೆ. ಸಕ್ಷಮ ಪ್ರಾಧಿಕಾರದ ಅನುಮತಿ ಕೂಡಾ ಪಡೆಯದಿಲ್ಲಾ ತಪ್ಪಿತಸ್ಥ ಅಧಿಕಾರಿಯನ್ನು ತತ್‌ಕ್ಷಣ ಅಮಾನತು ಗೊಳಿಸಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದ ಘಟನೆ ನಡೆಯಿತು.

ಬಜೆಟ್‌ ಮೇಲೆ ಭಾಷಣದ ವೇಳೆ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್‌ನ ಯು. ಬಿ. ವೆಂಕಟೇಶ್‌, “ಅತ್ತ ನೀರಿಗಾಗಿ ಪಾದಯಾತ್ರೆ ನಡೆಸುವವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುತ್ತದೆ. ಇತ್ತ ಸಭಾಪತಿಗಳ ವಿರುದ್ಧವೇ ಅನುಮತಿ ಪಡೆಯದೆ ಎಫ್‌ಐಆರ್‌ ದಾಖಲಾಗುತ್ತದೆ. ಅಂತಹ ಅಧಿಕಾರಿ ವಿರುದ್ಧ ಸರಕಾರ ಕ್ರಮವನ್ನೂ ಕೈಗೊಳ್ಳುವುದಿಲ್ಲ. ತಾವೂ (ಸಭಾಪತಿಗಳು) ಭೀಷ್ಮನ ದಯಾ ಮರಣದಂತೆ ಕಾಯುತ್ತಿದ್ದೀರಿ ಎಂದು ಹೇಳಿದರು.

Share News

About admin

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *