ಧಾರವಾಡ: ಬೇಲೂರ ಕೈಗಾರಿಕಾ ಪ್ರದೇಶದಲ್ಲಿ ಬೆಳಿಗ್ಗೆ ಎರಡು ವಾಹನಗಳ ಮಧ್ಯೆ ರಸ್ತೆ ಅಪಘಾತ ಸಂಭವಿಸಿ ಹರಿಯಾಣ ಮೂಲದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕಾರು ಹಾಗೂ ಖಾಸಗಿ ಬಸ್‌ಗಳ ಮಧ್ಯೆ ಈ ಅಪಘಾತ ಸಂಬಂಧಿಸಿದ್ದು, ಕಾರಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಅಸುನಿಗಿದ್ದಾನೆ. ಅಪಘಾತವಾದ ಕೂಡಲೇ ಖಾಸಗಿ ಬಸ್ ಚಾಲಕ ಪರಾರಿಯಾಗಿದ್ದಾನೆ.
ವಿಷಯ ತಿಳಿದ ತಕ್ಷಣ ಗರಗ ಠಾಣೆ ಪಿಎಸ್‌ಐ ಕಿರಣ ಮೋಹಿತೆ, ಇನ್‌ಸ್ಪೆಕ್ಟರ್ ಎಸ್.ಸಿ.ಪಾಟೀಲ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

