Breaking News

ಜನಪ್ರತಿನಿಧಿಗಳ ಅವಧಿ ಮುಗಿದ್ದ ನಂತರ ಆಸ್ತಿ ದುಪ್ಪಟ್ಟು ಆದರೂ ತನಿಖೆಯಾಗುತ್ತಿಲ್ಲಾ : ರಮೇಶ್‌ಕುಮಾರ್

ಬೆಂಗಳೂರು : ಚುನಾವಣೆಯ ಅಧಿಕಾರಯ ಆಳ್ವಿಕೆ ಯ ಅವಧಿ ಮುಗಿದ ನಂತರ ಆಸ್ತಿ ದುಪ್ಪಟ್ಟು ಆದರೂ ಯಾವುದೇ ತನಿಖೆ ನಡೆಯುತ್ತೀಲ್ಲಾ. ಚುನಾವಣೆ ಮೊದಲು ಕೇಂದ್ರ ಚುನಾವಣಾ ಆಯೋಗದ ನಿಯಮದಂತೆ ಚುನಾವಣೆಗೆ ಸ್ಪರ್ಧಿಸುವವರು ತಮ್ಮ ಆಸ್ತಿಯ ವಿವರ ಘೋಷಿಸಿ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು. ಆದರೆ ಪ್ರಮಾಣಪತ್ರ ನೀಡಿದ ಜನಪ್ರತಿನಿಧಿಗಳ ಆಸ್ತಿಯು ತಮ್ಮ ಅವಧಿ ಮುಗಿಯುವ ವೇಳೆಗೆ 10 ರಿಂದ 20 ಪಟ್ಟು ಹೆಚ್ಚಾಗುತ್ತಿದ್ದರೂ ತನಿಖೆಯಾಗುತ್ತಿಲ್ಲ. ಕಾನೂನಿಗೆ ತಿದ್ದುಪಡಿ ತಂದು ಎಲ್ಲಾ ಆಸ್ತಿಯ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸ್ಪೀಕರ್, ಕಾಂಗ್ರೆಸ್ ಸದಸ್ಯ ಕೆ.ಆರ್. ರಮೇಶ್‌ಕುಮಾರ್ ಸಲಹೆ ನೀಡಿದರು.

ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗವು ಚುನಾವಣೆಗೆ ಅಭ್ಯರ್ಥಿಯಾದವರು ತಮ್ಮ ಆಸ್ತಿ ಘೋಷಣೆ ಮಾಡಬೇಕು ಎಂಬ ಪದ್ಧತಿ ಪ್ರಾರಂಭಿಸಿತು. ಒಬ್ಬ ಜನಪ್ರತಿನಿಧಿಯಾಗುವ ವ್ಯಕ್ತಿಯ ಆರ್ಥಿಕ ಸ್ಥಿತಿಗತಿ ಗೊತ್ತಿರಬೇಕು. ಅವರು ಆಯ್ಕೆಯಾಗಿ ಬಂದ ಬಳಿಕ ಹೇಗೆ ನಡೆದುಕೊಳ್ಳುತ್ತಾರೆ ಎಂಬ ಬಗ್ಗೆ ಮಾಹಿತಿ ಇರಬೇಕು. ಅವರ ಅಧಿಕಾರವಧಿ ಮುಗಿದ ಬಳಿಕ ಐಟಿ ಅಥವಾ ಜಾರಿ ನಿರ್ದೇಶನಾಲಯಕ್ಕೆ ಅವರೆ ಘೋಷಿಸಿರುವ ಪ್ರಮಾಣಪತ್ರ ನೀಡಿ ಇದರ ಆಧಾರದ ಮೇಲೆ ಪರಿಶೀಲನೆ ನಡೆಸಿ ಎಂದು ಹೇಳುವಂತಿರಬೇಕು. ಆದರೆ ಚುನಾವಣಾ ಆಯೋಗಕ್ಕೆ ಈಗ ಸಲ್ಲಿಸುತ್ತಿರುವ ಪ್ರಮಾಣಪತ್ರ ನಿರುಪಯುಕ್ತ ಎಂಬಂತಾಗಿದೆ ಎಂದರು.

Share News

About admin

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *