Breaking News

ಅನಾಥ ರಸ್ತೆ ಎಂದು ಆರತಿ ಮಾಡಿ ವಿರೋಧಿಸಿ ಪ್ರತಿಭಟನೆ

ಹುಬ್ಬಳ್ಳಿ : ಧೂಳು ಮತ್ತು ರಸ್ತೆ ಗುಂಡಿಗಳದ್ದೇ ಹಾವಳಿ ಹೆಚ್ಚಾಗಿದೆ. ಇದನ್ನು ವಿರೋಧಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕ ಮಾಲೀಕರ ಸಂಘದ ವತಿಯಿಂದ ಅನಾಥ ರಸ್ತೆ ಎಂದು ಆರತಿ ಮಾಡಿ, ಶವದ ಮೇಲೆ ಹೂಗುಚ್ಚ ಇಡುವ ಹಾಗೇ ವಿರೋಧಿಸಿದ್ದಾರೆ.

ಈಗಾಗಲೇ ಚನ್ನಮ್ಮ ಸರ್ಕಾಲ್ ಸುತ್ತ ಫೈ ಓವ‌ರ್ ಕಾಮಗಾರಿ ಆರಂಭವಾಗಿದೆ. ಆದ್ರೆ ಕೆಳಗಿನ ರಸ್ತೆ ಗುಂಡಿಗಳಿಂದ ತುಂಬಿಕೊಂಡಿದ್ದು, ಅದೆಷ್ಟೋ ಜನರು ಬಿದ್ದು ಗಾಯಗೊಂಡಿದ್ದಾರೆ. ಅದಕ್ಕಾಗಿ ಆಟೋ ಚಾಲಕರ ಸಂಘ ಕೂಡಲೇ ಸುಗಮ ರಸ್ತೆ ಹಾಗೂ ತಗ್ಗು ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ, ಮಹಾನಗರ ಪಾಲಿಕೆ ಮತ್ತು ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಇನ್ನು ಚನ್ನಮ್ಮ ಸರ್ಕಲ್ ದಿಂದ ಹೊಸೂರ ಬಳಿಯಲ್ಲಿನ ದುರ್ಗಾದೇವಿ ಗುಡಯಿಂದ ಸುಗಮ ರಸ್ತೆ ಮಾಡಬೇಕು. ಮತ್ತು ಪ್ರೈಓವ‌ರ್ ಕಾಮಗಾರಿ ಇರುವ ಕಾರಣ ರಸ್ತೆ ಮೇಲಿರುವ ತಗ್ಗು ಗುಂಡಿಗಳನ್ನು ತಕ್ಷಣವೇ ಮುಚ್ಚುವ ಕೆಲಸ ಆಗಬೇಕು. ಇದರಿಂದಾಗಿ ಹಲವಾರು ಜನರು ತಗ್ಗು ಗುಂಡಿಯಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಆದ್ದರಿಂದ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜನಪ್ರತಿನಿಧಿಗಳು ಕೂಡಲೇ ರಸ್ತೆ ಕಾಮಗಾರಿ ಆರಂಭ ಮಾಡಬೇಕು ಎಂದು ಆಗ್ರಹಿಸಿದರು.

Share News

About Shaikh BigTv

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *