Breaking News

ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಅಪಪ್ರಚಾರ : ಪ್ರಧಾನಿ ಗರಂ

ನವದೆಹಲಿ: ‘ಕಾಶ್ಮೀರ್‌ ಫೈಲ್ಸ್‌ ’ಸಿನಿಮಾವನ್ನು ನೋಡಿ, ಅದರಲ್ಲಿ ಏನಿದೆ ಎಂಬುದನ್ನು ವೀಕ್ಷಿಸಿ ಸತ್ಯ ಪರೀಕ್ಷಿಸುವ ಬದಲು ಅದರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ವಾಕ್‌ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂದು ಪ್ರತಿಪಾದಿಸುವ ಕೆಲವರು 5-6 ದಿನಗಳಿಂದ ವ್ಯಗ್ರರಾಗಿದ್ದಾರೆ. ಬಹಳ ಕಾಲದಿಂದ ಉದ್ದೇಶ ಪೂರ್ವಕವಾಗಿ ಮುಚ್ಚಿಟ ಸತ್ಯ ಈಗ ಬಹಿರಂಗವಾಗಿರುವುದಕ್ಕೆ ಕೆಲವರಿಗೆ ಅಸಮಾಧಾನ ಇದೆ ಎಂದೂ ಮೋದಿ ಛೇಡಿಸಿದ್ದಾರೆ.

ಆ.24 (ದೇಶ ವಿಭಜನೆಗೊಂಡ ದಿನ) ವನ್ನು ಕರಾಳ ದಿನ ಎಂದು ನಾವು ಭಾವಿಸುತ್ತೇವೆ. ಹಲವು ಮಂದಿಗೆ ದೇಶ ವಿಭಜನೆಗೊಂಡದ್ದರ ಬಗ್ಗೆ ಆಕ್ಷೇಪ ಇದೆ. ಆದರೆ, ಅದರ ವಿರುದ್ಧ ಯಾರಾದರೂ ಸಿನಿಮಾ ಮಾಡಿದ್ದರೇ ಎಂದು ಮೋದಿ ಪ್ರಶ್ನಿಸಿದ್ದಾರೆ. ಇತಿಹಾಸವನ್ನು ಕಾಲ ಕಾಲಕ್ಕೆ ಜನರ ಮುಂದೆ ಪ್ರಸ್ತುತ ಪಡಿಸಬೇಕು. ಪುಸ್ತಕ, ಸಾಹಿತ್ಯ, ಕವನಗಳಂತೆ ಸಿನಿಮಾ ಕೂಡ ಇತಿಹಾಸ ತಿಳಿಸುವ ಒಂದು ಮಾಧ್ಯಮವೇ ಆಗಿದೆ ಎಂದೂ ಪ್ರಧಾನಿ ಹೇಳಿದ್ದಾರೆ.

Share News

About admin

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *