ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಮತದಾರ ಪಟ್ಟಿಯಿಂದ ಅನೇಕರ ಹೆಸರುಗಳು ಡಿಲೀಟ್ ಆಗಿದ್ದು ನಿಜ. ಮತದಾರರ ಪಟ್ಟಿ ಪರಿಶೀಲಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಖಾಸಗಿ ಏಜನ್ಸಿಗಳು ಎಲ್ಲೆಡೆ ಸರ್ವೆ ಮಾಡುತ್ತಿರುವಂತೆ ನಮ್ಮ ಪಕ್ಷದಿಂದಲೂ ಸರ್ವೇ ಮಾಡಿ, ಎಲ್ಲಾ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಆ್ಯಪ್ ಮೂಲಕ ಸರ್ವೇ ಮಾಡುತ್ತಿದ್ದೇವೆ, ಆ ಮಾಹಿತಿಯನ್ನು ಪಾಲಿಕೆಗೆ ಸಲ್ಲಿಸುತ್ತೇವೆ. ಚುನಾವಣಾಧಿಕಾರಿಗಳು ಮತದಾರರ ಪಟ್ಟಿಯನ್ನು ಪರಿಶೀಲಿಸಿ ಸೂಕ್ತ ಮತದಾರರ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸುತ್ತಾರೆ. ಹೆಸರು ಸೇರ್ಪಡೆ, ತಿದ್ದುವ, ತೆಗೆದು ಹಾಕುವ ಪ್ರಕ್ರಿಯೆಲ್ಲಿ ಯಾರೇ ಮತದಾರರ ಹೆಸರು ಕೈ ಬಿಟ್ಟರೂ ಮತ್ತೆ ಸೇರ್ಪಡೆಗೊಳಿಸಲು ಅವಕಾಶ ಇದೆ ಎಂದು ಶಾಸಕ ಬೆಲ್ಲದ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

