Breaking News

ಮಾ. 29 ರಂದು ಭರತನಾಟ್ಯ, ಜಾನಪದ ನೃತ್ಯಗಳ ಸಮ್ಮೇಳನ

ಹುಬ್ಬಳ್ಳಿ : ನಾಟ್ಯಾಂಜಲಿ ಕಲಾ ಮಂದಿರ ಪ್ರಸ್ತುತ ಪಡಿಸುವ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಿಂದಿಗೆ ನೃತ್ಯಾರ್ಪಣ-೨೦೨೨ ರ ಭರತನಾಟ್ಯ ಹಾಗೂ ಜಾನಪದ ನೃತ್ಯಗಳ ಸಮ್ಮೇಳನ ಇದೇ ದಿ. ೨೯ ರಂದು ಸಂಜೆ ೫ ಗಂಟೆಗೆ ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಜರುಗಲಿ ಎಂದು ನಾಟ್ಯಾಂಜಲಿ ಕಲಾ ಮಂದಿರ ಅಧ್ಯಕ್ಷೆ ಸೌಭಾಗ್ಯ ಮಹಾಲೆ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ೫ ಶಾಖೆಗಳನ್ನು ಹೊಂದಿದ್ದು, ಕಲಾ ಮಂದಿರದಲ್ಲಿ ಸುಮಾರು ೧೫೦ ವಿದ್ಯಾರ್ಥಿಗಳು ತರಬೇತಿಯನ್ನು ಪಡೆಯುತ್ತಿದ್ದಾರೆ. ದಿ. ೨೯ ರಂದು ನಡೆಯುವ ಕಾರ್ಯಕ್ರಮದಲ್ಲಿ ೧೫೦ ವಿದ್ಯಾರ್ಥಿಗಳು ಪಾಲ್ಗೊಂಳ್ಳಲಿದ್ದಾರೆ ಎಂದರು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಭರ ನಾಟ್ಯ ವಿದ್ವತ್ ಅಂತಿಮದಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಗೊಂಡ ಇವರನ್ನು ನಾಟ್ಯ ರಮಣಿ ರಂಬ ಹೆಸರಿನಿಂದ ಸನ್ಮಾನಿಸಿಸಲಾಗುವುದು ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಿರಸಿ ನಾಟ್ಯಾಂಜಲಿ ಕಲಾ ಕೇಂದ್ರದ ಡಾ. ಸಹನಾ ಭಟ್ ನೆರವೇರಿಸಲಿದ್ದಾರೆ‌ ಅಧ್ಯಕ್ಷತೆ ಧಾರವಾಡ ಜಾನಪದ ನೃತ್ಯ ಕಲಾವಿದ ಡಾ. ಪ್ರಕಾಶ ಮಲ್ಲಿಗವಾಡ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಹಿಳಾ ವಿದ್ಯಾಪೀಠದ ಆಡಳಿತಧಿಕಾರಿ ಗದಗ ಎಸ್.ಜಿ ನಿರೂಪಣೆ ಶ್ರೀಲಕ್ಷ್ಮಿ ಬೆಳಮಕರ, ಸಂತೋಷ ಸಾಲಿಯಾನ್, ಸಂತೋಷ ಮಹಾಲೆ ಸೇರಿದಂತೆ ಉಪಸ್ಥಿತರಿರಲಿದ್ದಾರೆ ಎಂದರು.

Share News

About admin

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *