Breaking News

ಸುಳ್ಳು ದಾಖಲೆಗಳನ್ನ ಸೃಷ್ಟಿಸಿ ಸಾರ್ವಜನಿಕ ಭೂಮಿ ದುರ್ಬಳಕೆ

ಹುಬ್ಬಳ್ಳಿ: ಉಣಕಲ್ ಗ್ರಾಮದ ಟಿಂಬರ ಪಕ್ಕದ ಬರುವ ಸರ್ವೆ ನಂಬರ್ 58/3 ಎ ಈ ಆಸ್ತಿಯಲ್ಲಿನ ಇದ್ದಂತಹ ಸಾರ್ವಜನಿಕ ಬಳಕೆ ಮೀಸಲಿಟ್ಟ 27 ಗುಂಟೆ ಜಾಗೆಯಲ್ಲಿ ಸುಳ್ಳು ದಾಖಲೆಗಳನ್ನ ಸೃಷ್ಟಿಸಿ 20 ಗುಂಟೆ ಜಾಗೆಯನ್ನು ಬೇರೆಯವರಿಗೆ ಸುರೇಖಾ ಗುಡದಿನ್ನಿ ಎನ್ನುವರು ಮಾರಾಟ ಮಾಡಿ ಕೋಟಿ ಕೋಟಿ ಹಣವನ್ನು ಪಡದಿದ್ದಾರೆ ಎಂದು ಸುನಿಲ್ ಎಂ ಕರಬೀ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಅವರು ಸುರೇಖಾ ಗುಡದಿನ್ನಿ ಎನ್ನುವರು ಸಾರ್ವಜನಿಕ ಬಳಕೆ ಮೀಸಲಿಟ್ಟ ಅನಧಿಕೃತವಾಗಿ ಪ್ರವೇಶ ಮಾಡಿ ಸುಳ್ಳು ದಾಖಲೆಗಳನ್ನ ಸೃಷ್ಟಿಮಾಡಿ ಸರ್ಕಾರಕ್ಕೆ ವಂಚನೆ ಮಾಡಿ ಕೋಟ್ಯಂತರ ರೋಪಾಯಿ ಬೆಲೆಬಾಳುವ ಸಾರ್ವಜನಿಕರ ಮೀಸಲಿಟ್ಟ 20 ಗುಂಟೆ ಜಾಗವನ್ನು ಸುರೇಖಾ ಗುಡದಿನ್ನಿ ಅವರು ಕೋಟಿ ಕೋಟಿ ಹಣಕ್ಕೆ ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನು ಕಂಡು ಗೊತ್ತಿಲ್ಲದಂಗೆ ಪಾಲಿಕೆಯ ವಲಯ ಕಚೇರಿಯ ಅಧಿಕಾರಿಗಳು, ಆಯುಕ್ತರು, ನಡೆಯನ್ನು ಖಂಡಿಸುತ್ತೇವೆ ಎಂದರು. ಕೂಡಲೇ ಪಾಲಿಕೆ ಆಯುಕ್ತರು ಶಿಕ್ಷಕಿ ಸುರೇಖಾ ಗುಡದಿನ್ನಿ ಅವರ ಮೇಲೆ ಭೂ ಕಬಳಿಕೆ ಕಾಯ್ದೆ ಅಡಿಯಲ್ಲಿ ಇವರನ್ನು ಕೂಡಲೇ ಜೈಲಿಗೆ ಅಟ್ಟಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಜೀವ ದುಮಕನಾಳ್, ಪರಶುರಾಮ ಗೋವಲ್, ಉಷಾ ಚಲವಾದಿ, ಚಂದ್ರಶೇಖರ್ ಯಾತಗೇರಿ , ಸಂಗೀತಾ ಸಂಗಮಿ , ಹಾಗೂ ಇತರರು ಉಪಸ್ಥಿತರಿದ್ದರು.

Share News

About admin

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *