ಯಾದಗಿರಿ: ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ಕಣೇಕಲ್‌ನಿಂದ ಸಾಯಿಬಣ್ಣ ಯಾದಗಿರಿಗೆ ತೆರಳುವಾಗ ಲಿಂಗೇರಿ ತಾಂಡಾದ ಬಳಿ ಬೈಕ್ ಜಾರಿ ನಿವೃತ್ತ ಎಎಸ್‌ಐ ಸಾಯಿಬಣ್ಣ ಬೇನಿಗಿಡ (65) ಸ್ಥಳದಲ್ಲೇ ಸಾವನ್ನಪ್ಪಿದರು.
ತಾಲ್ಲೂಕಿನ ಶೆಟಿಗೇರಾ ಗ್ರಾಮದ ನಿವಾಸಿಯಾಗಿದ್ದ ಸಾಯಿಬಣ್ಣ ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಹತ್ತಿರ ಕುಟುಂಬ ಸದಸ್ಯರೊಂದಿಗೆ ವಾಸವಿದ್ದರು.ಐದು ವರ್ಷದ ಹಿಂದೆ ನಿವೃತ್ತರಾಗಿದ್ದರು.ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ, ಜೇವರ್ಗಿ, ಶಹಾಪುರ, ಯಾದಗಿರಿ ನಗರದ ಸಂಚಾರ ಪೊಲೀಸ್ ಠಾಣೆ ಸೇರಿ ಹಲವು ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

