Breaking News

ಟ್ರಾಫಿಕ್ ಫೈನ್ ಕಟ್ಟದವರಿಗೆ ಭರ್ಜರಿ ರಿಲೀಫ್..! ಮತ್ತೆ 50% ರಿಯಾಯಿತಿ ಘೋಷಿಸಿದ ರಾಜ್ಯ ಸರ್ಕಾರ

ಬಾಕಿ ಟ್ರಾಫಿಕ್ ದಂಡಕ್ಕೆ ಅರ್ಧ ಹಣ ಸಾಕು..! ಜೂನ್ 21ರಿಂದ ಜುಲೈ 10ರವರೆಗೆ 50% ಡಿಸ್ಕೌಂಟ್..

ಟ್ರಾಫಿಕ್ ಫೈನ್ ಕಟ್ಟದವರಿಗೆ ಗುಡ್ ನ್ಯೂಸ್..!


ಮತ್ತೆ 50% ರಿಯಾಯಿತಿ ಘೋಷಿಸಿದ ಸರ್ಕಾರ


ಬೆಂಗಳೂರು: ಟ್ರಾಫಿಕ್ ಫೈನ್ ಕಟ್ಟದೇ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು 50% ರಿಯಾಯಿತಿಯಲ್ಲಿ ದಂಡ ಪಾವತಿಸುವ ಅವಕಾಶ ನೀಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.


ರಾಜ್ಯದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಹಾಗೂ ಈ ಹಿಂದೆ ನೀಡಲಾಗಿದ್ದ ರಿಯಾಯಿತಿ ಅವಧಿಯಲ್ಲಿ ಉತ್ತಮ ಪ್ರಮಾಣದ ದಂಡ ವಸೂಲಿ ಆಗಿದ್ದನ್ನು ಪರಿಗಣಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ..


ಸಿಗ್ನಲ್ ಜಂಪ್, ಮಿತಿ ಮೀರಿದ ವೇಗದಲ್ಲಿ ವಾಹನ ಚಲಾವಣೆ, ಹೆಲ್ಮೆಟ್ ಧರಿಸದೇ ಚಾಲನೆ, ಕಾರಿನಲ್ಲಿ ಸೀಟ್ ಬೆಲ್ಟ್ ಬಳಕೆ ಮಾಡದಿರುವುದು, ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ ಹಾಗೂ ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲುಗಡೆ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಈ 50% ರಿಯಾಯಿತಿ ಅನ್ವಯವಾಗಲಿದೆ…


ಬಾಕಿ ಉಳಿದಿರುವ ದಂಡದ ಅರ್ಧ ಮೊತ್ತ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ವಾಹನ ಸವಾರರಿಗೆ 20 ದಿನಗಳ ಕಾಲಾವಕಾಶ ನೀಡಲಾಗಿದೆ. ಸರ್ಕಾರದ ಆದೇಶದ ಪ್ರಕಾರ, ಜೂನ್ 21, 2026ರಿಂದ ಜುಲೈ 10, 2026ರವರೆಗೆ ಈ ವಿಶೇಷ ರಿಯಾಯಿತಿ ಜಾರಿಯಲ್ಲಿರಲಿದೆ.
ಈ ಅವಕಾಶವನ್ನು ಬಳಸಿಕೊಂಡು ಬಾಕಿ ಟ್ರಾಫಿಕ್ ಫೈನ್ ಪಾವತಿಸಿ ಕಾನೂನು ಸಮಸ್ಯೆಗಳಿಂದ ದೂರ ಇರಲು ವಾಹನ ಸವಾರರಿಗೆ ಸಂಚಾರಿ ಇಲಾಖೆ ಸೂಚಿಸಿದೆ

Share News

About Shaikh BigTv

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *