Breaking News

ಹಾಡಹಗಲೇ ಮಹಿಳೆಯ ಸರಗಳವು : ಬೆಚ್ಚಿಬಿದ್ದ ಜನತೆ

ಚಿಕ್ಕಬಳ್ಳಾಪುರ : ಮುಸುಕುಧಾರಿ ಇಬ್ಬರು ಕಳ್ಳರು ಹಾಡಹಗಲೇ ಮಹಿಳೆಯೋರ್ವರ 30 ಗ್ರಾಂ ಸರಗಳವು ಮಾಡಿರುವ ಘಟನೆ ನಗರದ ಚಾಮರಾಜಪೇಟೆಯಲ್ಲಿ ಭಾನುವಾರ ನಡೆದಿದೆ. ನಗರದ ವಾರ್ಡ್ 23ರ ನಿವಾಸಿ ಪ್ರಿಯ ಎಂಬ ಮಹಿಳೆಯೇ ಸರಕಳೆದುಕೊಂಡ ಮಹಿಳೆಯಾಗಿದ್ದು, ಪಲ್ಸರ್ 220 ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಸರಗಳವು ಮಾಡಿದ್ದಾರೆ ಎನ್ನಲಾಗಿದೆ. ಮೇಲ್ಮಡಿಯಲ್ಲಿದ್ದ ಪ್ರಿಯಾ ಅವರು ತಳಮಹಡಿಗೆ ಸಂಪ್ ಪರೀಕ್ಷೆ ಮಾಡಲು ಬರುತ್ತಿದ್ದಂತೆ ಹೊಂಚುಹಾಕಿ ಕಾದಿದ್ದ ಕಳ್ಳರು ಸರಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಘಟನೆಯಾದ ಕೂಡಲೇ ಪ್ರಿಯಾ ಅವರ ಪತಿ ಕಾರ್ತಿಕ್ ಮನೆಗೆ ಬಂದು ಮಾಹಿತಿ ಪಡೆದು ಕೂಡಲೇ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸ್ಥಳಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ಕಳ್ಳರಿಗಾಗಿ ಬಲೆ ಬೀಸಿದ್ದು ಸಿಸಿಟಿವಿ ಪರಿಶೀಲನೆಗೆ ತೊಡಗಿದ್ದು ಶೀಘ್ರವೇ ಕಳ್ಳರ ಹೆಡೆಮುರಿ ಕಟ್ಟುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *