Breaking News

ಪವಾರ್ ನ ಬೆಟ್ಟಂಗ್ ಪವಾಡ..ರಾಜಾರೋಷವಾಗಿ ನೆಡೆಯುತ್ತಿದೆ ಬೆಟ್ಟಿಂಗ್ ದಂಧೆ- ಕಂಡು ಕಾಣದಂತಿರುವ ಅಧಿಕಾರಿಗಳು…

ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಸದ್ದಿಲ್ಲದೆ ನೆಡೆಯುತ್ತಿದ್ದು,ಇದಕ್ಕೆ ಕಡಿವಾಡ ಹಾಕಬೇಕಾದ ಪೋಲಿಸರು ಕೂಡಾ ಬುಕ್ಕಿಗಳು ನೀಡುವ ಏಂಜಲು ಕಾಸಿಗೆ ಕೈಯೊಡ್ಡುತ್ತಿದ್ದಾರೆ.

ಹಳೇ ಹುಬ್ಬಳ್ಳಿಯ ವ್ಯಾಪ್ತಿಯ ಸುತ್ತಮುತ್ತಲಿನ ಸ್ಥಳಗಳಲ್ಲಿ ಈ ಬೆಟ್ಟಿಂಗ್ ದಂಧೆ ಜೋರಾಗಿದೆ. ಐಪಿಎಲ್ ಕ್ರಿಕೆಟ್ ಆಟ ಪ್ರಾರಂಭವಾದ ಕೂಡಲೇ
ಬುಕ್ಕಿಗಳು ರಾಜಾರೋಷವಾಗಿ ಬೆಟ್ಟಿಂಗ್ ದಂಧೆ ಶುರು ಮಾಡಿದ್ದಾರೆ. ಪೋಲಿಸರ ಭಯವಿಲ್ಲದೆ ನಿರಾತಂಕವಾಗಿ ಬೆಟ್ಟಿಂಗ್ ನೆಡೆಸುತ್ತಿರುವ ಬುಕ್ಕಿಗಳು ಪೋಲಿಸರಿಗೆ ಮಾಮೂಲಿ ನೀಡಿ ತಮ್ಮ ದಂಧೆ ನೆಡೆಸುತ್ತಿದ್ದಾರೆ. ಒಟ್ಟು 4 ಜನ ಬುಕ್ಕಿಗಳು ಈ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದು,ಇದರಲ್ಲಿ ಪವಾರ್.. ಎಂಬಾತ ಈ ನಾಲ್ಕು ಜನರಿಗೆ ಲೀಡರ್.

ಐಪಿಎಲ್ ಹಂಗಾಮ ಶುರುವಾಗಿದ್ದೆ ತಡ ಕ್ರಿಕೆಟ್ ಪ್ರೇಮಿಗಳಿಗೆ ಒಂದು ಕಡೆ ಹಬ್ಬದ ವಾತಾವರಣ ನಿರ್ಮಾಣವಾದ್ರೆ, ಇನ್ನೂ ಇದನ್ನೇ ಬಂಡವಾಳ ಮಾಡಿಕೊಂಡಿರುವ ಬೆಟ್ಟಿಂಗ್ ಬುಕ್ಕಿಗಳು ಯುವ ಜನರನ್ನು ದಂಧೆಗೆ ಬಳಸಿಕೊಂಡು ಅವರನ್ನ ಹಾದಿ ತಪ್ಪಿಸುತ್ತಿದ್ದಾರೆ.

ಒಟ್ಟಾರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿದ್ದು ಹೇಳೋರು ಕೇಳೋರು ಇಲ್ಲದಂತಾಗಿದೆ. ಇನ್ನೂ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು, ಪೋಲಿಸರು ಕಂಡು ಕಾಣದಂತೆ ಕುಳಿತಿದ್ದಾರೆ. ಇನ್ನೂ ಪೋಲಿಸರು ಈ ದಂಧೆಯಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನಾದರೂ ಸಂಬಂದಿಸಿದ ಅಧಿಕಾರಿಗಳು ಬುಕ್ಕಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ತಾರಾ ಎಂದು ಕಾದು ನೋಡಬೇಕಿದೆ.

Share News

About Shaikh BigTv

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *