Breaking News

ಬ್ಯಾರಿಕೇಡ್ ಫುಲ್ ಗೆ ಸಿಲುಕಿದ ಮಿನಿ ಟೆಂಪೋ

ಧಾರವಾಡ : ಭಾರಿ ವಾಹನಗಳಿಗೆ ನಿಷೇಧವಿದ್ದರೂ , ಅದನ್ನು ವಿರೋಧಿಸಿ ಸಂಚಾರ ಮಾಡಿದ ಪರಿಣಾಮ , ಮಿನಿ ಟೆಂಪೋ ಒಂದು ಕಿಲ್ಲಾದ ಕಮಾನ್ ಮುಂದೆ ಇರುವ ದೊಡ್ಡದಾದ ಕಬ್ಬಿಣದ ಪೋಲ್ ಗೆ ಸಿಕ್ಕಿಹಾಕಿಕೊಂಡ ಘಟನೆ ರವಿವಾರ ನಸುಕಿನ ಜಾವ ನಡೆದಿದೆ

ಇದನ್ನೆಲ್ಲಾ ಧಿಕ್ಕರಿಸಿದ ಪ್ರಮೋದ ರೋಡಲೈನ್ಸ ಎನ್ನುವ ಮಿನಿ ಟೆಂಪೊ ಸಂಚಾರ ಮಾಡಲು ಹೋಗಿ ಈ ರೀತಿ ಸಿಲುಕಿ ಹಾಕಿಕೊಂಡಿತ್ತು .

ಧಾರವಾಡ ಶಿವಾಜಿ ವೃತ್ತದಲ್ಲಿ ಇರುವ ಕಿಲ್ಲಾದ ಕಮಾನ್ ಮುಂದೆ ಚಿಕ್ಕದಾದ ರಸ್ತೆ ಇರುವ ಕಾರಣ ಈ ರೀತಿ ಕಬ್ಬಿಣದ ಪೋಲ್ ಹಾಕಲಾಗಿದೆ . ಭಾರಿ ವಾಹನಗಳನ್ನು ನಿಷೇಧಿಸುವ ಬ್ಯಾರಿಕೇಡ್ ಪೋಲ್ ಇದಾಗಿದ್ದು , ಇಲ್ಲಿ ಎಚ್ಚರಿಕೆಯ ಫಲಕವನ್ನು ಸಹ ಹಾಕಲಾಗಿದೆ . ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು . ಮಿನಿ ಟೆಂಪೋ ರಸ್ತೆಯಲ್ಲಿ ಸಿಲುಕಿದ ಕಾರಣ ಕೆಲಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಯಿತು

Share News

About admin

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *