ಹುಬ್ಬಳ್ಳಿ : ನಗರದ ಕಲಾಸುಜಯ ಕೇಂದ್ರದ ವತಿಯಿಂದ ಪ್ರಥಮ ಕಾರ್ಯಕ್ರಮ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಏಂಟು ವರ್ಷದ ಬಾಲಕಿ ನಿಯತಿ ಕುಲಕರ್ಣಿ ಪ್ರಥಮ ಪಲ್ಲವ ಮೂಲಕ ಕಲೆ ಜಗತ್ತಿಗೆ ಸೇರ್ಪಡೆಯಾಗೊಂಡರು,ಈ ಸಮಾರಂಭವನ್ನು ಸಲಂಗೈ ಪೂಜೆ ಅಥವ ಗೆಜ್ಜೆ ಪೂಜೆ ಎಂದು ಕರೆಯುತ್ತಾರೆ ಗೆಜ್ಜೆಯನ್ನು ಸಮರ್ಪಿಸುವ ಮೂಲಕ ಭರತನಾಟ್ಯ ಲೋಕಕ್ಕೆ ಸೆರ್ಪಡೆಗೊಳ್ಳುವುದಾಗಿದೆ. ಕಲಾಸುಜಯ ನೃತ್ಯ ಕೇಂದ್ರದ ಇದು ೧೫೦ ನೇಯ ಕಾರ್ಯಕ್ರಮವಾಗಿದೆ.
ಈ ಸಂದರ್ಭದಲ್ಲಿ ಗುರುಗಳಿಗೆ ಉದಯೋನ್ಮುಖ ಕಾಲವಿದರಿಗೆ ಸನ್ಮಾನ ಮಾಡಿ ಪ್ರೋತ್ಸಾಹಿಸಲಾಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಾಜಶ್ರಿ ಉಳ್ಳಾಲ ರೇಖಾ ತುಪ್ಪದ, ಕಲಾ ಸುಜಯ ನೃತ್ಯ ಕೇಂದ್ರದ ಸುಜಯ ಶ್ಯಾನಬಾಗ ಹಾಗೂ ಬಾಲಕಿ ತಂದೆ ಪವನ ಕುಲಕರ್ಣಿ, ಮತ್ತು ತಾಯಿ ಗಾಯತ್ರಿ ಕುಲಕರ್ಣಿ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

