Breaking News

ಪ್ರಚೋದನಕಾರಿ ಪೋಸ್ಟ್ : ಪೋಲಿಸ್ ವಾಹನ ಜಖಂ ಗೋಳಿಸಿದ ಕಿಡಿಗೇಡಿಗಳು


ಹುಬ್ಬಳ್ಳಿ : ಪ್ರಚೋದನಕಾರಿ ಪೋಸ್ಟ್ ಮಾಡಿದ್ದ ಹಳೆಹುಬ್ಬಳ್ಳಿಯ ಆನಂದನಗರದ ಫೊಡೈ ಪ್ಲಾಟಿನ ಯುವಕ ಮೆಕ್ಕಾದ ಮೇಲೆ ಕೇಸರಿ ಧ್ವಜ ಹಾರಿಸಿರುವ ಎಡಿಟ್ ಮಾಡಿದ ಪೋಸ್ಟ್ ಹರಿಬಿಟ್ಟಿದ್ದ . ಆದರೆ ಹಳೆಹುಬ್ಬಳ್ಳಿ ಪೊಲಿಸರು ಅದಾಗಲೇ ಕೃತ್ಯವೆಸಗಿದ್ದ ಯುವಕನನ್ನು ಅರೆಸ್ಟ್ ಕೂಡ ಮಾಡಿದ್ದರು . ಆದರೆ ಹಳೆ ಹುಬ್ಬಳ್ಳಿ ಪೊಲಿಸ್ ಠಾಣೆ ಎದುರು ಜಮಾವಣೆಗೊಂಡ ಇಸ್ಲಾಂ ಸಮುದಾಯದ ಯುವಕರು ವಿವಾದಾತ್ಮಕ ಪೊಸ್ಟ್ ಹಾಕಿದ ಆರೋಪಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ . ಅಷ್ಟೇ ಅಲ್ಲದೆ ನಿನ್ನೆರಾತ್ರಿ ಕಲ್ಲು ತೂರಾಟ ಮಾಡುವ ಮೂಲಕ ಪೊಲೀಸ್ ವಾಹನ ಜಖಂಗೊಳಿಸಿದ ಘಟನೆ ಹಳೇಹುಬ್ಬಳ್ಳಿ ನಡೆದಿದೆ.

5 ಪೊಲೀಸ್ ವಾಹನ‌ ಜಖಂಗೊಳಿಸಿ ಒಬ್ಬ ಇನ್ಸ್ ಪೆಕ್ಟರ್ ಸೇರಿ ಐವರು ಪೊಲೀಸ್ ಸಿಬ್ಬಂದಿ ಮೇಲೆ ಗಲಭೆಕೋರರು ಕಲ್ಲು ಎಸೆದ ಅವಮಾನೀಯ ಘಟನೆ ನಡೆದಿದೆ. ಈವರೆಗೂ 15 ಕ್ಕೂ ಹೆಚ್ಚು ಗಲಬೇಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಒಬ್ಬೊಬ್ಬರನ್ನಾಗಿ ಠಾಣೆಗೆ ಕರೆದುಕೊಂಡು ಬರುತ್ತಿದ್ದಾರೆ. ಗಲಭೆಕೋರರನ್ನ ಪ್ರತ್ಯೇಕ ವಾಹನದಲ್ಲಿ ಸಿಎಆರ್ ಗ್ರೌಂಡ್ ಗೆ ಪೊಲೀಸರು ಕರೆದೊಯ್ದುದಿದ್ದಾರೆ. ಪೊಲೀಸರು ಕಿಡಿಗೇಡಿಗಳು ತನಿಖೆಗೆ ಒಳಪಡಿಸಿದ್ದಾರೆ.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *