ಹುಬ್ಬಳ್ಳಿ : ಶ್ರೀ ಗುರುಬಸವ ಮಂಟಪ ಟ್ರಸ್ಟ್ ಕಮೀಟಿ ವತಿಯಿಂದ ವಿಶ್ವಗುರು ಬಸವೇಶ್ವರ ಜಯಂತಿ ಉತ್ಸವ ಕಾರ್ಯಕ್ರಮವನ್ನು ಇದೇ. ದಿ ೩೦ ರಿಂದ ಮೇ. ೩. ರವರೆಗೆ ನಗರದ ವೀರಾಪೂರ ರಸ್ತೆಯ ಶ್ರೀ ಗುರು ಬಸವ ಮಂಟಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಶಶಿಧರ ಕರವೀರಶೆಟ್ಟರ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. ೩೦ ರ ಕಾರ್ಯಕ್ರಮದಂದು ಮಹಾಮಹಿಮ ಸಂಗನ ಬಸವಣ್ಣನವರು ಘನಸಾನಿಧ್ಯ, ಮೂರುಸಾವಿರಮಠದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ. ಗುರುಸಿದ್ಧರಾಜಯೋಗಿಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು, ಬನವಾಸಿಯ ನಾಗಭೂಷಣ ಮಹಾಸ್ವಾಮಿಗಳು ದಿವ್ಯ ಸಮ್ಮುಖ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಶರಣ ಚಂದ್ರಶೇಖರ ಕರವೀಶೆಟ್ಟರ, ಬಸವಜ್ಯೋತಿ ಪ್ರಜ್ವಲನೆ ಕವಿವಿ ಧಾರವಾಡದ ಕುಲಪತಿ ಡಾ. ಕೆ.ಬಿ.ಗುಡಸಿ ಸೇರಿದಂತೆ ಉಪಸ್ಥಿತರಿರಲಿದ್ದಾರೆ. ದಿ. ೧ ರಂದು ಸ್ವಾನುಭಾವ ಸೌರಭ ಕಾರ್ಯಕ್ರಮ ಜರುಗಲಿದ್ದು, ಮೇ ೨ ರಂದು ವಚನ ವಿಜ್ಞಾನ ಗೋಷ್ಠಿ, ವಚನಗಳಲ್ಲಿ ವೈಜ್ಞಾನಿಕ ವಿಶೇಷ ಕಾರ್ಯಕ್ರಮ ಪ್ರಸ್ತುತಿ ಹಾಗೂ ಮೇ ೩ ರಂದು ವಿಶ್ವಗುರು ಬಸವೇಶ್ವರ ಜಯಂತಿ ಉತ್ಸವ ಜರುಗಲಿದ್ದು, ಅಂದು ಸಂಜೆ ಧರ್ಮಗುರು ಬಸವೇಶ್ವರರ ಭಾವಚಿತ್ರ ಮತ್ತು ಧರ್ಮಗ್ರಂಥ ಹಾಗೂ ವಚನಗ್ರಂಥಗಳ ಭವ್ಯ ಮೆರವಣಿಗೆ ಜರುಗಲಿದೆ ಎಂದರು.
ಷಟ್ ಸ್ಥಲ ಧ್ವಜಾರೋಹಣವನ್ನು ನಿವೃತ್ತ ವಾಣಿಜ್ಯ ತೆರೆಗೆ ಆಯುಕ್ತರಾದ ಜೆ.ಜಿ.. ಗೌಡಪ್ಪಗೋಳ ನೆರವೇರಿಸಲಿದ್ದಾರೆ, ಅಲ್ಲದೇ ಅಂದು ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಧೀರ ಸಾದರಹಳ್ಳಿ ಸುಲೋಚನಾ ಭೂಸನೂರ, ವ್ಹಿ.ಎಸ್.ಲಿಗಾಡೆ, ಬಸವೇಶ ಕರವಿಶೆಟ್ಟರ್ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

