Breaking News

ಆನ್‌ಲೈನ್‌ ಉದ್ಯೋಗ: ವಂಚನೆಗೆ ಒಳಗಾದ ಧಾರವಾಡ ಯುವತಿ


ಧಾರವಾಡ : ಆನ್‌ಲೈನ್‌ನಲ್ಲಿ ಉದ್ಯೋಗ ಹುಡುಕಲು ಹೋಗಿ ಧಾರವಾಡ ಯಾಲಕ್ಕೆ ಶೆಟ್ಟರ ಕಾಲೋನಿ ಮಯೂರ ಪಾರ್ಕ್ ನಿವಾಸಿ ಸುಹಾಸಿನಿ ಶಿಗ್ಗಾವಿ ಅವರಿಗೆ ಅಪರಿಚಿತ ವ್ಯಕ್ತಿ ೮೭,೭೯೧ ರೂ ವಂಚಿಸಿರುವ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ .

ಸುಹಾಸಿನಿಯವರು ಉದ್ಯೋಗ ಹುಡಕಲು ಲಿಂಕ್ ಡಿನ್ ಆಯಪ್‌ನಲ್ಲಿ ತನ್ನ ಎಲ್ಲ ಸ್ವವಿವರ ದಾಖಲಿಸಿದ್ದಾರೆ.ನಂತರ ಅಪರಿಚಿತ ವ್ಯಕ್ತಿ ಸಂದೇಶ ಕಳುಹಿಸಿ ಮನಿ ಮೇಕಿಂಗ್ ಲಿಂಕ್ ಕಳುಹಿಸಿದ್ದಾನೆ. ಅದನ್ನು ನಂತರ ಅವರು ಓಪನ್ ಮಾಡಿದ್ದಾರೆ . ಕರೆ ಮಾಡಿ ನೀವು ಹಲವು ವಸ್ತುಗಳನ್ನು ಖರೀದಿಸಬೇಕು ಎಂದು ೭೮೦ ರೂ.ವರ್ಗಾಯಿಸಿಕೊಂಡು ಅವರ ಖಾತೆಗೆ ೯೮೮ ರೂ ಹಾಕಿದ್ದಾನೆ . ಇದಾದ ಬಳಿಕ ಆ ವ್ಯಕ್ತಿ ಹಂತ ಹಂತವಾಗಿ ಅವರ ಖಾತೆಯಿಂದ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ .

Share News

About admin

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *