ಹುಬ್ಬಳ್ಳಿ : 2020 ರಲ್ಲಿ ದರೋಡೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಪೋಲಿಸರು ಯಶಸ್ವಿಯಾಗಿದ್ದಾರೆ .
ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಕ್ರಾಸ್ ಹತ್ತಿರ ದರೋಡೆ ಮಾಡಿ ತಲೆಮರೆಸಿಕೊಂಡಿದ್ದ ಇರ್ಫಾನ್ ಬೇಪಾರಿ ಮತ್ತು ಆಸಿಫ್ ಬೇಪಾರಿ ಎಂಬುವವರ ಬಂಧನ ಮಾಡಲಾಗಿದೆ . ಇನ್ನೂ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ವಾಹನವನ್ನು ಮತ್ತು ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ . ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸೆಕ್ಟರ್ ಆರ್ . ಬಿ ಗೋಕಾಕ್ , ಪಿಎಸ್‌ಐ ಪ್ರಸಾದ್ ಪಣೇಕರ್ , ಠಾಣೆ ಸಿಬ್ಬಂದಿಗಳಾದ ಮಂಜುನಾಥ್ ಯಳವರ್ , ಮಾಂತೇಶ್ ನಾನಾಗೌಡ , ಗಿರೀಶ್ ತಿಪ್ಪನವರ್ , ಎಂ ಎಫ್ ವಾಲಿಕಾರ್ , ವಿಶ್ವನಾಥ್ ಬಡಿಗೇರ , ಸೇರಿದಂತೆ ಪಾಲ್ಗೊಂಡಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

