ನವದೆಹಲಿ: ಬಸವರಾಜ ಬೊಮ್ಮಾಯಿ ವೀಕೆಸ್ಟ್ ಮುಖ್ಯಮಂತ್ರಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರು, ‘ನನ್ನ ಆಡಳಿತದಲ್ಲಿ ಅವರಿಗೆ (ಡಿ.ಕೆ. ಶಿವಕುಮಾರ್) ತೊಂದರೆ ಆಗಿದೆ. ಅವರು ಏನೆನೋ ಪ್ರಯತ್ನ ಮಾಡಿದರೂ ಯಶಸ್ವಿ ಆಗಿಲ್ಲ. ನಾನು ಸರಳವಾಗಿ ಆಡಳಿತ ಮಾಡಿಯೇ ಅವರಿಗೆ ತೊಂದರೆ ಆಗಿದೆ. ಇನ್ನು ಸ್ಟ್ರಾಂಗ್ ಆಗಿ ಆಡಳಿತ ಮಾಡಿದರೆ ಅವರಿಗೆ ತಡೆದುಕೊಳ್ಳೊಕೆ ಆಗುವುದಿಲ್ಲ’ ಎಂದು ತಿರುಗೇಟು ನೀಡಿದರು.
ಹಿಟ್ ಅಂಡ್ ರನ್ ಮಾಡಬಾರದು ಇದೇ ವೇಳೆ ಇತ್ತೀಚೆಗೆ ರಾಜ್ಯದಲ್ಲಿ ತೀವ್ರವಾಗಿ ಚರ್ಚೆ ಆಗುತ್ತಿರುವ ಪಿಎಸ್ ಐ ಪರಿಕ್ಷೆ ಅಕ್ರಮದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ ‘ಕಾನೂನು ಪ್ರಕಾರವೇ ತನಿಖೆ ನಡೆಯುತ್ತಿದೆ. ಈಗಾಗಲೇ ಕೆಲವರ ಬಂಧನವಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಹಿಟ್ ಅಂಡ್ ರನ್ ಮಾಡಬಾರದು. ರಾಜ್ಯ ಸರಕಾರ ಯಾವುದೇ ರೀತಿಯಲ್ಲಿ ವೈಫಲ್ಯ ಆಗಿಲ್ಲ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

