Breaking News

ಹೂವಿನ ರಾಮಣ್ಣ ಹೃದಯಾಘಾತದಿಂದ ನಿಧನ

ಮಂಡ್ಯ: ಪಟ್ಟಣದ ಕೃಷ್ಣರಾಜಪೇಟೆ ತಾಲ್ಲೂಕಿನ ಶಾತ್ತದ ವೈಷ್ಣವ ಮಹಾಸಭಾದ ಮುಖಂಡರು, ಪಟ್ಟಣದ ಜನಪ್ರಿಯ ಹೂವಿನ ವ್ಯಾಪಾರಿಗಳಾದ ಊಚನಹಳ್ಳಿ ರಾಮಣ್ಣ(74) ಅವರು ಹೃದಯಾಘಾತದಿಂದ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ನಿಧನರಾದರು.ಇಂದು ಬೆಳಿಗ್ಗೆ 10 ಗಂಟೆಗೆ ಮೃತ ರಾಮಣ್ಣನವರ ಶವ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ… ಮೃತರು ಪತ್ನಿ ಜಯಮ್ಮ ಪುತ್ರರಾದ ಯೋಗೇಶ್, ಶ್ರೀನಿವಾಸ್ ಮತ್ತು ಪುತ್ರಿ ಪದ್ಮಾ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಸಮಾಜಸೇವಕರು, ಪುರಸಭೆ ಕುವೆಂಪು ವಾಣಿಜ್ಯ ಮಳಿಗೆಗಳ ವರ್ತಕರ ಸಂಘದ ಅಧ್ಯಕ್ಷರೂ ಆಗಿರುವ ರಾಮಣ್ಣ ಅವರ ಅಕಾಲಿಕ ನಿಧನಕ್ಕೆ ಶಾಸಕ ಡಾ.ನಾರಾಯಣಗೌಡ, ಮಾಜಿಸ್ಪೀಕರ್ ಕೃಷ್ಣ, ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ಜಿ.ಪಂ ಸದಸ್ಯ ಹೆಚ್.ಟಿ.ಮಂಜು, ಮಾಜಿ ಜಿಪಂ ಉಪಾಧ್ಯಕ್ಷ ಎಸ್.ಅಂಬರೀಶ್, ಯುವಮುಖಂಡ ಶ್ರೀಧರ್ ಸಿರಿವಂತ್ ಸೇರಿದಂತೆ ಅಪಾರ ಬಂಧುಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *