Breaking News

ಹಜ್ ಯಾತ್ರಾರ್ಥಿಗಳಿಗೆ ಶುಭಾಶಯಗಳ ಹಾರೈಕೆ: ದೇಶದ ಒಳಿತಿಗಾಗಿ ಪ್ರಾರ್ಥಿಸುವಂತೆ ಕೋರಿಕೆ

ಹುಬ್ಬಳ್ಳಿ : ಹುಬ್ಬಳ್ಳಿಯಿಂದ  ಪವಿತ್ರ ಹಜ್ ಯಾತ್ರೆ ಕೈಗೊಂಡಿರುವ
ಹಜ್ ಯಾತ್ರಾರ್ಥಿಗಳಿಗೆ ಇಂದು ನಗರದ ಇಂಡಿ ಪಂಪ್  HSF ದರ್ಗಾದಲ್ಲಿ ಸನ್ಮಾನಿಸಿ ಶುಭಾಶಯ ಕೊರಲಾಯಿತು, ಹಳೆ ಹುಬ್ಬಳ್ಳಿಯ ಖಾಜಾ ಮೊಯಿನುದ್ದೀನ್ ಪಟ್ಟಣವಾಲೇ ,ಹಾಪಿಜ್ ಮೊಹಮ್ಮದ್ ನೋರಿ ,ಹಾಗೂ ಪಜಲು ಅಹ್ಮದ್ ಕಾಲಿಗುಡ್ಡೆ ಇದೆ ಮೊದಲ ಬಾರಿಗೆ ಹಜ್ ಯಾತ್ರೆ ಕೈಗೊಂಡಿದ್ದಿದ್ದಾರೆ

ಈ ವೇಳೆ ಮಾತನಾಡಿದ ಮುನ್ನಾ ಲಕ್ಕುಂಡಿ ಮೂವರು ನಮ್ಮ ದೇಶದ ದರ್ಗಾ ಅನುಯಾಯಿಗಳು ಹಜ್ ಯಾತ್ರೆ ಮಾಡುತ್ತಿರುವುದು ಸಂತಸ ತಂದಿದೆ ಎಲ್ಲರಿಗೂ ಶುಭವಾಗಲಿ, ಇವರೆಲ್ಲರೂ ಸಮಾಜದ ಒಳಿತಿಗೆ ಪ್ರಾರ್ಥಿಸಲಿ ಎಂದರು

ಇನ್ನು ಧರ್ಮಗುರು ಅಬ್ದುಲ್ ಸುಬಾನಿ ಆಶ್ರಪಿ ಮಾತನಾಡಿ, ಹಜ್ ಯಾತ್ರೆಯು ಸಮಾನತೆ ,ಏಕತೆ,ಹಾಗೂ ಸೌಹಾರ್ದತೆ ಸಂಕೇತವಾಗಿದೆ ,ಹಜ್ ಯಾತ್ರೆಯು ಬಡವ ಸಾಹುಕಾರ ಎನ್ನುವ ಬೇದ ಭಾವ ಮರೆತು ಮಾಡುವ ಪವಿತ್ರ ಯಾತ್ರೆ ಯಾಗಿದ್ದು ಎಲ್ಲರಿಗೂ ಶುಭವಾಗಲಿ ನಾಡಿನ ದೇಶದ ಒಳಿತಿಗಾಗಿ ಹಜ್ ನಲ್ಲಿ ಪ್ರಾರ್ಥಿಸುವಂತೆ ಯಾತ್ರಾರ್ಥಿಗಳಿಗೆ ಕೇಳಿಕೊಂಡರು.

ಈ ವೇಳೆ ಯಾತ್ರಾರ್ಥಿಗಳ ಕುಟುಂಬಸ್ಥರು,ಸ್ನೇಹಿತರು ಹಾಗೂ ಧರ್ಮ ಗುರು ಅಬ್ದುಲ್ ಸುಬಾನ್ ಆಶ್ರಪಿ, ಮುಸ್ಲಿಂ ಜಮಾತ್ ಮುಖಂಡ ಮುನ್ನಾ ಲಕ್ಕುಂಡಿ,ಹಾಗೂ ಮುನೀರ್ ಅಹ್ಮದ್ ಮುಲ್ಲಾ ಸೇರಿ ಒಂದು ಮೂವರು ಯಾತ್ರಾರ್ಥಿಗಳಿಗೆ ದರ್ಗಾ ದಲ್ಲಿ ಹೂ ಮಾಲೆ, ಶಾಲು ಹಾಕಿ ಶುಭ ಹಾರೈಸಿದರು,

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *