ಬೆಂಗಳೂರು : ನಗರ ಪ್ರದೇಶದ ವಸತಿ ರಹಿತರಿಗೆ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ನಗರ ಪ್ರದೇಶದಲ್ಲಿ 1 ಲಕ್ಷ ಮನೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ವಿಶೇಷ ಒತ್ತು ನೀಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮನೆಗಳ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯ ಸರ್ಕಾರವು 52 ಸಾವಿರ ಮನೆಗಳ ನಿರ್ಮಾಣ ಕಾರ್ಯವನ್ನು ಪೂರ್ತಿ ಮಾಡಿದ್ದು, ಇನ್ನೂ 50 ಸಾವಿರ ಮನೆಗಳಿಗೆ ಕಾರ್ಯಾದೇಶ ನೀಡಿದ್ದೇವೆ. ಫಲಾನುಭವಿಗಳಿಂದ ವಂತಿಗೆ ಬರುವುದು ತಡವಾಗುತ್ತಿರುವನ್ನು ಅರಿತು ಬಡವರ ಪರವಾಗಿ ಬ್ಯಾಂಕುಗಳಿಗೆ ಸಹಕಾರ ಗ್ಯಾರಂಟಿ ನೀಡಿ 500 ಕೋಟಿ ರೂ.ಗಳನ್ನು ಪಡೆಯಲಾಗುವುದು. ಮನೆ ಪೂರ್ತಿಯಾದಗ ಕಂತಿನಲ್ಲಿ ಪಾವತಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news




