Breaking News

ಸಾಲ’ದ ವಾಹನ ಮಾರಾಟ: ದೂರು

ಕುಂದಾಪುರ: ಫೈನಾನ್ಸ್ ನಿಂದ ಸಾಲ ಮಾಡಿ ವಾಹನ ಖರೀದಿಸಿ ಸುಳ್ಳು ದಾಖಲೆ ಸೃಷ್ಟಿಸಿ ವಾಹನ ಮಾರಾಟ ಮಾಡಿದ ಕುರಿತು ಪ್ರಕರಣ ದಾಖಲಾಗಿದೆ.ಚೋಳಮಂಡಲಂ ಇನ್ವೆಸ್ಟ್ಮೆಂಟ್‌ ಅಂಡ್‌ ಫೈನಾನ್ಸ್‌ ಕಂ.ಲಿನ ಮಿಥುನ್‌ ಎ.ಕೆ. ದೂರು ನೀಡಿದ್ದು, ಅದರಲ್ಲಿ ಸಿದ್ದಾಪುರ ಶೇಡಿಮನೆಯ ಅವಿಚರಣ್‌ ಸುರೇಶ್‌ ನಾಯ್ಕ ಎಂಬ ವ್ಯಕ್ತಿ ಕಲ್ಲಯ್ಯ ವೀರಯ್ಯ ಸುರೇಬಾನು ಬೆಳಗಾಂ ಅವರಿಂದ ಖರೀದಿಸಿದ ವಾಹನಕ್ಕೆ 5.20 ಲಕ್ಷ ರೂ.ಸಾಲ ಪಡೆದಿದ್ದರು. ಸಾಲದ ಹಣವನ್ನು ಸವದತ್ತಿಯಲ್ಲಿರುವ ಚೋಳಮಂಡಲಂ ಶಾಖೆಗೆ ಕಳುಹಿಸಿದ್ದು ಕಲ್ಲಯ್ಯ ವೀರಯ್ಯ ಅವರು ಸಾಲದ ಮೊತ್ತವನ್ನು ಪಡೆದುಕೊಂಡಿದ್ದಾರೆ. ವಾಹನಕ್ಕೆ ಸಂಬಂಧಿಸಿದ ಮೂಲ ಆರ್.ಸಿ. ಹಾಗೂ ಇತರ ದಾಖಲೆಗಳು ಕುಂದಾಪುರ ಶಾಖೆಯಲ್ಲಿರುವಾಗಲೇ ಆರೋಪಿಗಳು ಆರ್.ಸಿ. ಹಾಗೂ ಮೂಲದಾಖಲೆಗಳು ಕಳೆದು ಹೋಗಿದೆ ಎಂದು ಬೈಲಹೊಂಗಲ ಆರ್.ಟಿ.ಓ ಕಚೇರಿಗೆ ಸುಳ್ಳು ದಾಖಲೆ ನೀಡಿ ನಕಲು ದಾಖಲಾತಿ ಪಡೆದು ಫೈನಾನ್ಸ್ ನಲ್ಲಿ ಸಾಲ ಪಡೆದ ವಾಹನವನ್ನು 3ನೇ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ. ಸಂಸ್ಥೆಗೆ ಮೋಸ ಮಾಡಿದ್ದಾಗಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *