ಬೆಂಗಳೂರು: ಮಂಗಳ, ಚಂದ್ರ, ಸೂರ್ಯನತ್ತ ಮುಖಮಾಡಿದ್ದ ಇಸ್ರೋ ವಿಜ್ಞಾನಿಗಳು ಈಗ ಹೊಸದಾಗಿ ಶುಕ್ರ ಗ್ರಹದತ್ತ ತಮ್ಮ ಪ್ರಯಣಕ್ಕೆ ಅಣಿಯಾಗುತ್ತಿದ್ದಾರೆ. ಚಂದ್ರಯಾನ-3 ಮತ್ತು ಆದಿತ್ಯ L-1 ಮಿಷನ್‌ಗಳ ಯಶಸ್ಸಿನ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದೇಶದ ಬಾಹ್ಯಾಕಾಶ ಸಂಶೋಧನಾ ಪ್ರಯತ್ನಗಳನ್ನು ಮುತ್ತೊಂದು ಮಜಲಿಗೆ ಕೊಂಡೊಯ್ಯಲು ಮುಂದಾಗುತ್ತಿದ್ದು, ಈ ಬಾರಿ ಭೂಮಿಯ ಅವಳಿ ಎಂದೂ ಕರೆಯಲ್ಪಡುವ ಶುಕ್ರಗ್ರಹದ ಮೇಲೆ ತನ್ನ ದೃಷ್ಟಿಯನ್ನು ನೆಟ್ಟಿದೆ.
ಈ ಬಗ್ಗೆ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಶುಕ್ರ ಗ್ರಹಕ್ಕೆ ಮಿಷನ್ ಅನ್ನು ಈಗಾಗಲೇ ಸಂಯೋಜನೆ ಮಾಡಲಾಗಿದೆ. ನೌಕೆಗೆ ಕೆಲವು ಪೇಲೋಡ್‌ಗಳು ನಿರ್ಮಾಣ ಹಂತದಲ್ಲಿವೆ ಎಂದು ತಿಳಿಸಿದ್ದಾರೆ. ಬಾಹ್ಯಾಕಾಶ ಸಂಸ್ಥೆ ಇಸ್ರೋ ಶುಕ್ರ ಗ್ರಹದ ಯೋಜನೆಯ ಅನುಮೋದನೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲು ಯೋಜಿಸಿದ್ದು, ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಅದನ್ನು ಪ್ರಾರಂಭಿಸಲು ಮುಂದಾಗುತ್ತದೆ ಎಂದು ತಿಳಿದು ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





