Breaking News

ರಜೆ ಕೋರಿ ಊರಿಗೆ ಹೊರಟ ಯೋಧ ಶವವಾಗಿ ಪತ್ತೆ


ಚಿಕ್ಕಮಗಳೂರು: ರಜೆಗೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಹೊರಟಿದ್ದ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮಸಿಗದ್ದೆ ಗ್ರಾಮದ ಯೋಧ ಗಣೇಶ್ ಸಾವನ್ನಪ್ಪಿದ್ದಾರೆ. ಜೂನ್ 9ರಂದು ಹೊರಟಿದ್ದ ಗಣೇಶ್ ಮೃತದೇಹ ಬಿಹಾರದ ಕಿಶನ್‌ಗಂಜ್‌ನಲ್ಲಿ ಪತ್ತೆಯಾಗಿದೆ.

ಗಣೇಶ್ 15 ದಿನಗಳ ಹಿಂದೆ ರಜೆ ಹಾಕಿ ಊರಿಗೆ ಬಂದಿದ್ದರು. ಜೂನ್ 12ರಂದು ಸೇನಾ ತಂಡ ಸೇರಬೇಕಾದ ಕಾರಣ ಜೂನ್ 9ರಂದು ಹೊರಟಿದ್ದರು. ಆದರೆ ಬಿಹಾರದ ಕಿಶನ್‍ಗಂಜ್‌ನಲ್ಲಿ ಅವರ ಮೃತದೇಹ ಸಿಕ್ಕಿದೆ.

ಶನಿವಾರ ಬೆಳಗ್ಗೆ ಪತ್ನಿ ಜೊತೆ ಗಣೇಶ್ ಮಾತನಾಡಿದ್ದರು. ಆಗ ಅವರು ಮುಖ ತೊಳೆಯುತ್ತಿದ್ದೇನೆ ಎಂದು ಹೇಳಿದ್ದರು. ಮಧ್ಯಾಹ್ನದ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಭಾನುವಾರ ರಾತ್ರಿ ಸೇನೆಯ ಅಧಿಕಾರಿಗಳು ಕರೆ ಮಾಡಿ ಗಣೇಶ್ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *