Breaking News

ಪಿಎಸ್‌ಐಗೆ ಅವಾಜ್ ಹಾಕಿದ ಬಸವರಾಜ ಹೊರಟ್ಟಿ


ಧಾರವಾಡ: ಇಂದು ಪರಿಷತ್ ನ 2 ಪದವೀಧರ, 2 ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಮತದಾನ ನಡೆಯುತ್ತಿದೆ. ಈ ವೇಳೆಯಲ್ಲಿಯೇ ಚುನಾವಣಾ ನೀತಿಯ ಆದೇಶ ಪಾಲಿಸುವಂತೆ ಸೂಚಿಸಿದ ಪಿಎಸ್‌ಐಗೆ ಬಿಜೆಪಿಯ ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಬಸವರಾಜ ಹೊರಟ್ಟಿ ಯಾರ್ರೀ ಡಿಸಿ ಎಂಬುದಾಗಿ ಅವಾಜ್ ಹಾಕಿರೋ ಘಟನೆ ನಡೆದಿದೆ.

ಧಾರವಾಡ ಶಾರದಾ ಹೈಸ್ಕೂಲ್ ಬಳಿಯಲ್ಲಿನ ಮತಗಟ್ಟೆಯಲ್ಲಿ, ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹಾಗೂ ಪಿಎಸ್‌ಐ ಕವಿತಾ ನಡುವೆ ಮಾತಿನ ಚಕಮಕಿ ನಡೆದಿರೋದಾಗಿ ತಿಳಿದು ಬಂದಿದೆ. ಚುನಾವಣಾಧಿಕಾರಿ ಆದೇಶವನ್ನು ತಮ್ಮ ಬೆಂಬಲಿಗರು ಪಾಲಿಸುತ್ತಿಲ್ಲ ಎಂಬುದಾಗಿ ಪಿಎಸ್‌ಐ ಕವಿತಾ ಹೇಳಿದ್ರೇ.. ಯಾರ್ರೀ ಅವಾ ಡಿಸಿ ಎಂಬುದಾಗಿ ಬಿಜೆಪಿ ಪರಿಷತ್ ಅಭ್ಯರ್ಥಿ ಬಸವರಾಜ ಹೊರಟ್ಟಿ ಪಿಎಸ್‌ಐಗೆ ಅವಾಜ್ ಹಾಕಿದ್ದಾರೆ.

ಈ ವೇಳೆ ಒಂದು ಟೇಬಲ್ ಹಾಗೂ 2 ಖುರ್ಚಿ ಹಾಕಿಕೊಂಡು ಮತಗಟ್ಟೆ ಬಳಿಯಲ್ಲಿ ಕುಳಿತುಕೊಳ್ಳೋದಕ್ಕೆ ಅವಕಾಶವಿದೆ. ಆದ್ರೇ.. ಇಲ್ಲಿ ಜಾಸ್ತಿ ಜನರು ಕುಳಿತಿದ್ದಾರೆ ಎಂಬುದಾಗಿ ಡಿಸಿ ಹೇಳಿದ್ದಾರೆ ಅಂತ ಪಿಎಸ್‌ಐ ಹೇಳಿದ್ರೇ.. ಆ ಡಿಸಿ ಯಾರ್ರೀ ಅವಾ ಎಂಬುದಾಗಿ ಗದರಿಸಿದ್ದಾರೆ. ಹೆಚ್ಚು ಜನ ಬಂದ್ರೇ ಅವರ್ ಹೇಗೆ ಕುಳಿತುಕೊಳ್ಳಬೇಕು ಎಂಬುದಾಗಿ ಅವಾಜ್ ಹಾಕಿರೋ ವೀಡಿಯೋ, ಈಗ ಸೋಷಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗಿದೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *